alex Certify ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ವಾಗ್ದಾಳಿ; ಹಿಂದುಳಿದ ವರ್ಗಗಳ ವಿರೋಧಿ ಎಂದು ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ವಾಗ್ದಾಳಿ; ಹಿಂದುಳಿದ ವರ್ಗಗಳ ವಿರೋಧಿ ಎಂದು ಕಿಡಿ

ಶಿವಮೊಗ್ಗ: ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಬಡವರ ಕಲ್ಯಾಣಕ್ಕಾಗಿ ಶೇ.10ರಷ್ಟು ಮೀಸಲಾತಿ ನೀಡಿರುವುದನ್ನು ಇಡೀ ದೇಶದ ಜನರೇ ಸ್ವಾಗತಿಸುತ್ತಿದ್ದರೆ ಸಿದ್ದರಾಮಯ್ಯ ಮಾತ್ರ ಇದನ್ನು ವಿರೋಧಿಸಿ ತಾನು ಹಿಂದುಳಿದ ವರ್ಗಗಳ ವಿರೋಧಿ ಎಂದು ಸಾಬೀತುಪಡಿಸಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.

ಅವರು ಇಂದು ಶಾಸಕರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಬಡವರಿಗಾಗಿ ಶೇ.10ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಸಂವಿಧಾನಬದ್ಧವಾಗಿಯೇ ಲೋಕಸಭೆಯಲ್ಲಿ ಬಹುಮತದೊಂದಿಗೆ ನಿಗದಿ ಮಾಡಿದೆ. ಸುಪ್ರಿಂ ಕೋರ್ಟ್ ಸಹ ಇದಕ್ಕೆ ಒಪ್ಪಿಗೆ ನೀಡಿದೆ. ಸಾಮಾಜಿಕ ಕಳಕಳಿಯ ಈ ನಿರ್ಧಾರವನ್ನು ಕಾಂಗ್ರೆಸ್ ಹಿರಿಯ ನಾಯಕರು ಕೂಡ ಸ್ವಾಗತಿಸಿದ್ದಾರೆ. ಮುಖ್ಯವಾಗಿ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಕೂಡ ಸಮ್ಮತಿ ನೀಡಿ ಸ್ವಾಗತಿಸಿದ್ದಾರೆ. ಆದರೆ ತಾನು ಹಿಂದುಳಿದ ನಾಯಕ ಎಂದು ಕೊಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯ ಮಾತ್ರ ಇದನ್ನು ವಿರೋಧಿಸಿದ್ದಾರೆ ಎಂದು ದೂರಿದರು.

ಮಲ್ಲಿಕಾರ್ಜುನ ಖರ್ಗೆಯವರು ಸಿದ್ದರಾಮಯ್ಯನಂತಹವರಿಗೆ ಕಿವಿಹಿಂಡಿ ಬುದ್ಧಿ ಹೇಳಬೇಕು ಮತ್ತು ತಾನು ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಂಡು ಬಡವರಿಗೆ ಶೇ.10ರ ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧ ಇದೆ ಎಂದು ಹೇಳುವ ಸಿದ್ದರಾಮಯ್ಯ ಕೂಡಲೇ ಜನತೆಯ ಕ್ಷಮೆ ಕೇಳಬೇಕು. ಆ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯನವರ ಈ ಮಾತು ಕ್ರಾಂಗ್ರೆಸ್ಸಿನ ದ್ವಂದ್ವ ನೀತಿಗೆ ಕಾರಣವಾಗಿದೆ ಸಿದ್ದರಾಮಯ್ಯನೇನು ಸರ್ವಜ್ಞ ಅಲ್ಲ ಎಂದು ಟೀಕಿಸಿದರು.

ಸರ್ವಪಕ್ಷಗಳ ಸಭೆಯಲ್ಲಿ ರಾಜ್ಯಸರ್ಕಾರ ಎಸ್ಸಿ/ ಎಸ್ಟಿ÷ ಮೀಸಲಾತಿಯನ್ನು ಹೆಚ್ಚಳ ಮಾಡಿದೆ. ನಾಗಮೋಹನದಾಸ್ ಅವರ ವರದಿಯನ್ನು ಜಾರಿಮಾಡಿದೆ. ಹೀಗಿದ್ದರೂ ವಿರೋಧ ಪಕ್ಷದ ಸಿದ್ದರಾಮಯ್ಯ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ತಾನು ವಿರೋಧಿ ಸಿದ್ದರಾಮಯ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.

ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಲ್ಲಿ ಪೈಪೋಟಿ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಬಡವರ ಪಕ್ಷ ಅಲ್ಲ ಎಂಬುದನ್ನು ಈಗ ಸಾಬೀತುಪಡಿಸುತ್ತಿದೆ. ಚುನಾವಣೆಗೆ ನಿಲ್ಲುವವರು 2 ಲಕ್ಷ ರೂ. ಕಟ್ಟಬೇಕಂತೆ ಹಾಗಾದರೆ ಬಡವರು ಅಭ್ಯರ್ಥಿಯಾಗಿ ಸ್ಪರ್ಧಿಸಲೇಬಾರದೆ ಎಂದು ಪ್ರಶ್ನಿಸಿದ ಅವರು, ಅರ್ಜಿ ಸಲ್ಲಿಸುವ ದಿನಾಂಕವನ್ನು ಕಾಂಗ್ರೆಸ್ ಪಕ್ಷ ವಿಸ್ತರಿಸಿರುವುದನ್ನು ನೋಡಿದರೆ ಇದು ಹಣಕ್ಕಾಗಿ ಎಂದು ವ್ಯಂಗ್ಯವಾಡಿದರು.

ನಾನು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ನವರು ಸುಮ್ಮನೆ ಪ್ರಚಾರ ಮಾಡುತ್ತಿದ್ದಾರೆ. ಒಂದು ಪಕ್ಷ ನಾನು ಚುನಾವಣೆಗೆ ನಿಲ್ಲದಿದ್ದರೆ ಕಾಂಗ್ರೆಸ್ ನವರಿಗೆ ಬಹಳ ಸಂತೋಷವಾಗುತ್ತದೆ ಎಂದ ಅವರು, ಸಿದ್ದರಾಮಯ್ಯ ಅವರಿಗೆ ಇನ್ನೂ ಕ್ಷೇತ್ರವೇ ಸಿಕ್ಕಿಲ್ಲ. ಅಲೆಮಾರಿಯಂತೆ ಚುನಾವಣೆಗೆ ನಿಲ್ಲಲು ರಾಜ್ಯದ ತುಂಬಾ ಓಡಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಅವರಿಗೆ ಬರಬಾರದಿತ್ತು. ಅವರು ರಾಜೀನಾಮೆ ಕೊಟ್ಟು ರಾಜಕಾರಣದಿಂದ ಹಿಂದೆ ಸರಿದು ಬಡವರ ಸೇವೆ ಮಾಡಲಿ ಎಂದರು.

ದೆಹಲಿ ಶ್ರದ್ಧಾ ಹತ್ಯೆಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದ್ರೋಹಿ ಮುಸಲ್ಮಾನರು ಇಂತಹ ನೀಚ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಪ್ರಗತಿಪರರು ಎನಿಸಿಕೊಂಡವರು ಇಂತಹ ಸಂದರ್ಭದಲ್ಲಿ ಧ್ವನಿಯನ್ನು ಎತ್ತುವುದೇ ಇಲ್ಲ. ಅವರನ್ನು ಹೇಗೆ ಯೋಗ್ಯರೆಂದು ಕರೆಯಬೇಕು ಅವರೆಲ್ಲ ಅಯೋಗ್ಯರು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಕೂಡ ಈ ಘಟನೆಯನ್ನು ಏಕೆ ಪ್ರಶ್ನೆ ಮಾಡುತ್ತಿಲ್ಲ? ಕೆಲವು ಮುಸಲ್ಮಾನರ ಮಾನಸಿಕತೆ ಬದಲಾಗದಿದ್ದರೆ ನಾವೇ ಬದಲು ಮಾಡಬೇಕಾಗುತ್ತದೆ ಎಂದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...