ಹುಬ್ಬಳ್ಳಿ: ಸಿಎಂ ಬೊಮ್ಮಾಯಿ ಸುಳ್ಳು ಹೇಳುತ್ತಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ ಮೇಲೆ ಬಹಳ ಗೌರವ ಇತ್ತು. ಆದರೆ ಇತ್ತೀಚೆಗೆ ಅವರ ಹೇಳಿಕೆಗಳಿಂದ ನಿರಾಸೆಯಾಗಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಓರ್ವ ಮಾಜಿ ಸಿಎಂ, ವಿಪಕ್ಷ ನಾಯಕನಾಗಿ ಇಂಥ ಆರೋಪಗಳನ್ನು ಮಾಡುವುದು ಸರಿಯಲ್ಲ. ಅವರ ಮೇಲೆ ನಮಗೆ ಬಹಳ ಗೌರವವಿತ್ತು ಎಂದು ಹೇಳಿದ್ದಾರೆ.
ವಿಮಾನದ ಪೈಲಟ್, ಸಹ-ಪೈಲಟ್ ಗೆ ವಿಭಿನ್ನ ಊಟ ನೀಡುವುದ್ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್ ವಿವರ
ಸಂಪುಟ ವಿಸ್ತರಣೆ ಬಗ್ಗೆ ಶಾಸಕ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಎಲ್ಲರ ಹೇಳಿಕೆಗಳಿಗೂ ನಾನು ಪ್ರತಿಕ್ರಿಯಿಸುತ್ತಾ ಇರಲು ಆಗುವುದಿಲ್ಲ ಎಂದರು.
ಇನ್ನು ಕೋವಿಡ್ ಮೂರನೆ ಅಲೆ ತಡೆಗಟ್ಟಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಟೆಸ್ಟ್ ವರದಿ ಬರುವಂತೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇನ್ನು ಒಮಿಕ್ರಾನ್ ವೇಗವಾಗಿ ಹರಡುತ್ತೆ ಆದರೆ ತೀವ್ರತೆ ಕಡಿಮೆ ಎಂಬ ಮಾಹಿತಿ ಇದೆ. ಜನರು ಎಚ್ಚರದಿಂದ ಇರುವುದು ಅಗತ್ಯ ಎಂದು ಹೇಳಿದರು.