
ಜಕಾರ್ತಾದ ಉತ್ತರದಲ್ಲಿ ಭಾರಿ ಯಂತ್ರೋಪಕರಣಗಳೊಂದಿಗೆ ವ್ಯವಹರಿಸುವ ಕಂಪನಿಯೊಂದರಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 35 ವರ್ಷದ ವ್ಯಕ್ತಿ ಕರ್ತವ್ಯದಲ್ಲಿದ್ದಾಗ ಸಿಡಿಲು ಬಡಿದಿದೆ.
ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಮಳೆಯ ಸಮಯದಲ್ಲಿ ವ್ಯಕ್ತಿ ಕೈಯಲ್ಲಿ ಕೊಡೆ ಹಿಡಿದುಕೊಂಡು ತೆರೆದ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಕೆಲವು ಸೆಕೆಂಡುಗಳ ನಂತರ, ಮಿಂಚು ಮನುಷ್ಯನನ್ನು ಹೊಡೆದಿದ್ದು, ಬೆಂಕಿಯ ಕಿಡಿಗಳು ಚಿಮ್ಮಿವೆ. ಕೂಡಲೇ ಆತ ನೆಲಕ್ಕೆ ಬಿದ್ದಿದ್ದು, ಆತನ ಸಹೋದ್ಯೋಗಿಗಳು ಸಹಾಯಕ್ಕೆ ಧಾವಿಸಿದ್ದಾರೆ.
ಅದೃಷ್ಟವಶಾತ್, ಆ ವ್ಯಕ್ತಿ ಮಾರಣಾಂತಿಕ ಘಟನೆಯಿಂದ ಬದುಕುಳಿದಿದ್ದಾರೆ, ಆದರೆ, ಅವರ ಕೈಗಳಲ್ಲಿ ಸುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಇದೀಗ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ವ್ಯಕ್ತಿಯ ಕೈಯಲ್ಲಿದ್ದ ವಾಕಿ-ಟಾಕಿಯಿಂದಾಗಿ ಮಿಂಚು ಬಡಿದಿದೆ ಎಂದು ನಂಬಲಾಗಿದೆ. ಛತ್ರಿಯನ್ನು ಹೊತ್ತೊಯ್ದಿದ್ದು ಕೂಡ ಸಿಡಿಲು ಬಡಿದಿರುವ ಸಾಧ್ಯತೆ ದಟ್ಟವಾಗಿದೆ ಎಂದು ಕೆಲವರು ಊಹಿಸಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.