ಕೆಲವು ಬಾರಿ ಜಿಮ್ ಮಾಡುವ ವಿಡಿಯೋ ಹಾಕುವ ಮೂಲಕ, ಸುಮ್ಮನೆ ರಸ್ತೆ ಮೇಲೆ ಸಾಮಾನ್ಯರಂತೆ ನಡೆದುಕೊಂಡು ಹೋಗುವ ಮೂಲಕ ಸರಳ ಹಾಗೂ ಆರೋಗ್ಯಕರ ಜೀವನದ ಮಹತ್ವವನ್ನು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಜನರಿಗೆ ಆಗಾಗ ತಿಳಿಸುತ್ತಿದ್ದಾರೆ. ಈ ವಿಡಿಯೋಗಳು ವೈರಲ್ ಕೂಡ ಆಗಿವೆ. ಜನರಿಂದ ’ ಸಾಮಾನ್ಯ ಸಿಎಂ’ ಎಂಬ ಪ್ರಶಂಸೆಗೂ ಪಾತ್ರವಾಗಿವೆ.
ಈ 5 – 10 ರೂ. ನಾಣ್ಯ ನಿಮ್ಮಬಳಿ ಇದ್ದರೆ ನಿಮಗೆ ಬಂಪರ್…!
ಆದರೆ, ಇತ್ತೀಚೆಗೆ ಸ್ಟಾಲಿನ್ ಅವರು ಚೆನ್ನೈನ ಕನ್ನಗಿ ನಗರ ಬಸ್ ನಿಲ್ದಾಣದಲ್ಲಿ ಜನರಿಂದ ತುಂಬಿದ್ದ ಒಂದು ಬಸ್ ಏರಿಕೊಂಡಿದ್ದಾರೆ. ಪ್ರಯಾಣಿಕರನ್ನು ಮಾತನಾಡಿಸಿ, ಮಹಿಳೆಯರಿಗೆ ತಮ್ಮ ಸರ್ಕಾರ ನೀಡಿರುವ ಉಚಿತ ಬಸ್ ಪ್ರಯಾಣ ಸೌಲಭ್ಯಗಳ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ವಿಚಾರಿಸಿದ್ದಾರೆ.
ಪ್ರಯಾಣಿಕರಿಗಂತೂ ತಮ್ಮ ಎದುರು ಮುಖ್ಯಮಂತ್ರಿ ಇದ್ದಾರೆ ಎಂದು ನಂಬಲು ಸಾಧ್ಯವೇ ಆಗಿಲ್ಲ. ಅತ್ಯಂತ ಸಂತೋಷದಿಂದ ಸಿಎಂ ಜತೆಗೆ ತಮ್ಮ ಅನುಭವ ಹಂಚಿಕೊಂಡು, ಸಲಹೆಗಳನ್ನು ನೀಡಿದ್ದಾರೆ.
ಮೈಕ್ ಕಸಿದು ವೇದಿಕೆಯಿಂದಲೇ ಕಾಂಗ್ರೆಸ್ ಮುಖಂಡನನ್ನು ತಳ್ಳಿದ್ರು; ಕಾರ್ಯಕರ್ತರ ಗಲಾಟೆ, ವಾಗ್ವಾದ
ಸ್ಟಾಲಿನ್ ಅವರು ‘ಎಂ-19ಬಿ ‘ ಬಸ್ ಏರಿ ಜನರೊಂದಿಗೆ ಬೆರೆತ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಅಂದಹಾಗೇ, ಸ್ಟಾಲಿನ್ ಅವರು ಬಸ್ ಏರುವ ಪೂರ್ವ ಆಲೋಚನೆ ಅಥವಾ ವ್ಯವಸ್ಥೆ ಮಾಡಿಕೊಂಡಿರಲಿಲ್ಲ.
ಕೊರೊನಾ ಲಸಿಕೆ ಅಭಿಯಾನವು ನಗರದಲ್ಲಿ ಯಾವ ಪ್ರಗತಿ ಹಂತದಲ್ಲಿದೆ ಎಂದು ಪರಿಶೀಲನೆಗೆ ಅವರು ಟಿ-ನಗರಕ್ಕೆ ಹೊರಟ್ಟಿದ್ದರಂತೆ. ಲಸಿಕೆ ವಿತರಣೆ ಶಿಬಿರಗಳ ಭೇಟಿಗೂ ಮುನ್ನ ಕನ್ನಗಿ ನಗರದಲ್ಲಿ ಹೊಳೆದ ಬಸ್ ಪ್ರಯಾಣದ ಆಲೋಚನೆಯನ್ನು ಅವರು ಹಿಂದೆ-ಮುಂದೆ ಆಲೋಚಿಸದೆಯೇ ಸಾಕಾರಗೊಳಿಸಿದ್ದಾರೆ. ಇದ್ದರೇ, ಇಂಥ ಸರಳ ಸಿಎಂ ನಮ್ಮ ಜತೆಗೆ ನಿತ್ಯವೂ ಇರಬೇಕು ಎಂದು ಟ್ವೀಟಿಗರು ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.