alex Certify ಸಿಗರೇಟಿಗಿಂತ ಅಪಾಯಕಾರಿ ಸೊಳ್ಳೆ ಕಾಯಿಲ್‌ನ ಹೊಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಗರೇಟಿಗಿಂತ ಅಪಾಯಕಾರಿ ಸೊಳ್ಳೆ ಕಾಯಿಲ್‌ನ ಹೊಗೆ…!

ಬೇಸಿಗೆ ಬಂತೆಂದರೆ ಸೊಳ್ಳೆಗಳ ಕಾಟ ವಿಪರೀತ. ಸಂಜೆಯಾಗ್ತಿದ್ದಂತೆ ಸೊಳ್ಳೆಗಳು ಮನೆಗಳಿಗೆ ನುಗ್ಗುತ್ತವೆ. ಕಿಟಕಿ ಬಾಗಿಲುಗಳನ್ನು ಮುಚ್ಚಿದರೂ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದನ್ನು ತಪ್ಪಿಸಲು ಕೆಲವರು ಕೀಟನಾಶಕಗಳನ್ನು ಬಳಸಿದರೆ, ಕೆಲವರು ಸೊಳ್ಳೆ ಬತ್ತಿಗಳನ್ನು ಬಳಕೆ ಮಾಡುತ್ತಾರೆ. ಸುರುಳಿ ಸುರುಳಿಯಾಗಿರುವ ಈ ಸೊಳ್ಳೆ ಬತ್ತಿ ನಮ್ಮ ಜೀವನವನ್ನೇ ನರಕವಾಗಿಸುತ್ತದೆ ಅನ್ನೋದು ಅನೇಕರಿಗೆ ತಿಳಿದಿಲ್ಲ.

ಸೊಳ್ಳೆಗಳನ್ನು ಓಡಿಸಲು ನಾವು ಸುಡುವ ಬತ್ತಿಯಿಂದ ಅನೇಕ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇದರಿಂದ ಬರುವ ಹೊಗೆ ಕೋಣೆಯ ಮಾಲಿನ್ಯದ ಮಟ್ಟವನ್ನು ಹೆಚ್ಚಿಸಬಹುದು. ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಅಥವಾ COPDಗೆ ಕಾರಣವಾಗಬಹುದು. ಅಧ್ಯಯನದ ಪ್ರಕಾರ ಒಬ್ಬ ವ್ಯಕ್ತಿಯು ಈ ಸೊಳ್ಳೆ ಬತ್ತಿಯ ಹೊಗೆಯನ್ನು ಉಸಿರಾಡಿದರೆ, ಅದು 100 ಸಿಗರೇಟ್ ಸೇದುವುದಕ್ಕೆ ಸಮಾನವಾಗಿರುತ್ತದೆ.

ಇಷ್ಟೇ ಅಲ್ಲ ಪೂಜೆಯಲ್ಲಿ ಬಳಸುವ ಅಗರಬತ್ತಿಯ ಹೊಗೆ 50 ಸಿಗರೇಟ್ ಸೇದುವುದಕ್ಕೆ ಸಮ. ಮಾಹಿತಿಯ ಪ್ರಕಾರ ಶ್ವಾಸಕೋಶದ ಉರಿಯೂತದ ಕಾಯಿಲೆಯಾದ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಅಥವಾ COPD ಯಿಂದ ಮುಂಬೈನಲ್ಲಿ ಪ್ರತಿದಿನ ಕನಿಷ್ಠ 6 ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಈ ಸ್ಥಿತಿಯು ಮುಂಬೈ ಮಾತ್ರವಲ್ಲ, ಭಾರತದ ಅನೇಕ ಭಾಗಗಳಲ್ಲಿದೆ.

ಮೊದಲು ಈ ಸೊಳ್ಳೆ ಬತ್ತಿಗಳನ್ನು ಪೈರೆಥ್ರಮ್ ಪೇಸ್ಟ್‌ನಿಂದ ತಯಾರಿಸಲಾಗುತ್ತಿತ್ತು. ಪೈರೆಥ್ರಾಯ್ಡ್ ಕೀಟನಾಶಕಗಳನ್ನು ಈಗ ಸೊಳ್ಳೆ ಸುರುಳಿಗಳಲ್ಲಿ ಹಾಕಲಾಗುತ್ತದೆ ಅಥವಾ ಸಿಟ್ರೊನೆಲ್ಲಾದಂತಹ ಸಸ್ಯಗಳಿಂದ ತಯಾರಿಸಲಾಗುತ್ತದೆ. ಕೀಟನಾಶಕವನ್ನು ಹೊಂದಿರುವ ಸೊಳ್ಳೆ ಸುರುಳಿಗಳನ್ನು ಸುಡುವುದರಿಂದ ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟಬಹುದು ಅಥವಾ ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ನೀವು ಈ ಕ್ರಮಗಳನ್ನು ಅನುಸರಿಸಬಹುದು ಎಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ: –

1. ಫುಲ್ ಸ್ಲೀವ್ ಶರ್ಟ್ ಮತ್ತು ಲಾಂಗ್ ಪ್ಯಾಂಟ್ ಧರಿಸಿ.

2. ಸೊಳ್ಳೆ ಪರದೆಯೊಂದಿಗೆ ಮಲಗಿ.

3. ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ನಿಂತ ನೀರನ್ನು ತಕ್ಷಣವೇ ತೆಗೆಯಿರಿ.

4. ನಿಮ್ಮ ಮನೆಯ ಸುತ್ತ ಸ್ವಚ್ಛತೆ ಕಾಪಾಡಿ.

5. ಸಂಜೆ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡಿ.

6. ಸೊಳ್ಳೆಗಳು ಹುಟ್ಟುವುದನ್ನು ತಡೆಯಲು ಕಾಲಕಾಲಕ್ಕೆ ಫಾಗಿಂಗ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...