ಮೆಲ್ಬೋರ್ನ್: ಕೇರಳದ ಎನ್ಆರ್ಐ ವ್ಯಕ್ತಿಯೊಬ್ಬರು ಭಾರತೀಯ ಮೂಲದ ದಾದಿಯರಿಗೆ ಸಹಾಯಹಸ್ತ ಚಾಚಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರು ನೆಲೆಸಲು ನೆರವಾಗಿದ್ದಾರೆ.
20 ವರ್ಷಗಳ ಹಿಂದೆ, ಕೇರಳದ ಅಲಪ್ಪುಳದ ತಣ್ಣೀರ್ಮುಕ್ಕಂ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಬಿಜು ಕುನ್ನುಂಪುರತು ಅವರು ಮಲೇಷ್ಯಾದಿಂದ ಆಸ್ಟ್ರೇಲಿಯಾದ ಮೆಲ್ಬೋರ್ನ್ಗೆ ಸ್ಥಳಾಂತರಗೊಂಡಿದ್ದಾರೆ. ಅಲ್ಲಿನ ಆಸ್ಪತ್ರೆಯೊಂದರ ನೇಮಕಾತಿ ವಲಯದಲ್ಲಿ ಕೆಲಸ ಮಾಡಲು ಅವರಿಗೆ ಅವಕಾಶ ಸಿಕ್ಕಾಗ, ಇದು ಭಾರತದ ದಾದಿಯರಿಗೆ ಉತ್ತಮ ಅವಕಾಶ ಎಂದು ಮನಗಂಡಿದ್ದಾರೆ.
ತಡಮಾಡದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಭಾರತೀಯ ದಾದಿಯರಿಗೆ ಸಹಾಯ ಮಾಡಲು ಮೆಲ್ಬೋರ್ನ್ನಲ್ಲಿ ಕೌಶಲ್ಯ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಸದ್ಯಕ್ಕೆ, ಅವರು ಭಾರತ, ಫಿಲಿಪೈನ್ಸ್ ಮತ್ತು ನೇಪಾಳದಿಂದ ಬಂದಿರೋ ಸುಮಾರು 20,000 ದಾದಿಯರಿಗೆ ಸಹಾಯ ಮಾಡಿದ್ದಾರೆ.
ಕೋವಿಡ್ ನಂತರ, ಆಸ್ಟ್ರೇಲಿಯಾಕ್ಕೆ ದಾದಿಯರ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಮೊದಲು, ಆಸ್ಟ್ರೇಲಿಯಾ ಸಾಮಾನ್ಯ ನರ್ಸಿಂಗ್ನಲ್ಲಿ ಡಿಪ್ಲೊಮಾ ಹೊಂದಿರುವ ದಾದಿಯರಿಗೆ ಅವಕಾಶ ಮಾಡಿಕೊಟ್ಟಿತು. ಆದರೆ ಈಗ ಬಿಎಸ್ಸಿ ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ಅನುಮೋದಿಸುತ್ತಾರೆ. ಅಂದಹಾಗೆ, ಕೇವಲ ಮೂರು ತಿಂಗಳ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಸಹ ಸ್ವೀಕರಿಸಲಾಗುತ್ತಿದೆ ಎಂದು ಬಿಜು ತಿಳಿಸಿದ್ದಾರೆ.