alex Certify ಸಿಎಂ ಬೊಮ್ಮಾಯಿ ಸಂಪುಟದ ಹಲವು ಸಚಿವರಿಗೆ ಕೊಕ್ ……? ಅಮಿತ್ ಶಾ ಆಗಮನ ಸಿದ್ಧತೆ ಬೆನ್ನಲ್ಲೇ ಮಂತ್ರಿಗಳಿಗೆ ಶುರುವಾಯ್ತು ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಬೊಮ್ಮಾಯಿ ಸಂಪುಟದ ಹಲವು ಸಚಿವರಿಗೆ ಕೊಕ್ ……? ಅಮಿತ್ ಶಾ ಆಗಮನ ಸಿದ್ಧತೆ ಬೆನ್ನಲ್ಲೇ ಮಂತ್ರಿಗಳಿಗೆ ಶುರುವಾಯ್ತು ಆತಂಕ

ಬೆಂಗಳೂರು: ಮುಂದಿನ ವಾರ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ, ಬಿಜೆಪಿ ಚಾಣಾಕ್ಷ್ಯ ಅಮಿತ್ ಶಾ ಆಗಮಿಸಲಿದ್ದು, ಸಿಎಂ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಹಲವು ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜನವರಿ 8, 9ರಂದು ರಾಜ್ಯಕ್ಕೆ ಅಮಿತ್ ಶಾ ಆಗಮಿಸಲಿದ್ದು, ರಾಜ್ಯ ಬಿಜೆಪಿ ನಾಯಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ, ಇತ್ತೀಚಿನ ಕಾರ್ಯಕಾರಿಣಿ ಸಭೆಯಲ್ಲಿನ ವಿಚಾರಗಳ ಬಗ್ಗೆ ಚರ್ಚೆ, ಸಚಿವ ಸಂಪುಟ ಪುನಾರಚನೆ, ವಿಧಾನಸಭಾ ಚುನಾವಣೆಗೆ ಸಿದ್ಧತೆ, ಪಕ್ಷ ಸಂಘಟನೆ, ಸಂಪುಟ ಪುನಾರಚನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಪಿಂಚಣಿದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಜೀವನ ಪ್ರಮಾಣ ಪತ್ರ ಸಲ್ಲಿಕೆ ಗಡುವು 2 ತಿಂಗಳು ವಿಸ್ತರಣೆ; ಫೆ. 28 ರ ವರೆಗೆ ಅವಕಾಶ

ರಾಜ್ಯ ಸಚಿವ ಸಂಪುಟದಿಂದ ಕೆಲ ಸಚಿವರಿಗೆ ಕೋಕ್ ನೀಡುವ ಸಾಧ್ಯತೆ ಹೆಚ್ಚಿದ್ದು, ವಲಸಿಗ ಮೂರು ಹಾಗೂ ಮೂಲ ಬಿಜೆಪಿಯ ಮೂರು ಸಚಿವರನ್ನು ಕೈಬಿಟ್ಟು ಎಲೆಕ್ಷನ್ ಕ್ಯಾಬಿನೆಟ್ ರಚನೆ ಮೂಲಕ ಒಟ್ಟು ಹತ್ತು ಸ್ಥಾನಗಳನ್ನು ತುಂಬಲು ಹೈಕಮಾಂಡ್ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಅಮಿತ್ ಶಾ ಆಗಮನದ ಸುದ್ದಿ ಬೆನ್ನಲ್ಲೇ ಹಲವು ಸಚಿವರಿಗೆ ಮಂತ್ರಿ ಸ್ಥಾನ ಉಳಿಸಿಕೊಳ್ಳುವ ವಿಚಾರವಾಗಿ ತಲೆನೋವು ಆರಂಭವಾಗಿದ್ದು, ಸಂಕ್ರಾಂತಿ ನಂತರದಲ್ಲಿ ಸಂಪುಟದಲ್ಲಿ ಏನಲ್ಲಾ ಬದಲಾವಣೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...