ಕಾಡಿನ ರಾಜ ಸಿಂಹ ಅಂತಾ ಪುಟ್ಟ ಮಕ್ಕಳಲ್ಲಿ ಪ್ರಶ್ನೆ ಕೇಳಿದ್ರೂ ಉತ್ತರಿಸುತ್ತಾರೆ. ಸಿಂಹವನ್ನು ಕಾಡಿನ ‘ರಾಜ’ ಎಂದೇ ಕರೆಯಲಾಗುತ್ತದೆ. ಅವುಗಳ ರಾಜಗಾಂಭೀರ್ಯ ನಡವಳಿಕೆಯನ್ನು ಸಾಬೀತುಪಡಿಸಲು ಇಂಟರ್ನೆಟ್ ನಲ್ಲಿ ಹಲವಾರು ವಿಡಿಯೋಗಳಿವೆ. ಇದೀಗ ಇಂಥಾ ರಾಜನನ್ನೇ ಮರಿಯಾನೆಯೊಂದು ಮಣಿಸಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.
ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಆನೆಯೊಂದರ ಮೇಲೆ ಸಿಂಹಿಣಿಗಳು ಗರ್ವದಿಂದ ದಾಳಿ ಮಾಡುವ ವಿಡಿಯೋವನ್ನು ನೋಡಬಹುದು. ಗುಂಪಾಗಿದ್ದ ಸಿಂಹಿಣಿಗಳು ಆನೆಯ ಬೆನ್ನಿನ ಮೇಲೆ ನೆಗೆಯಲು ಶುರು ಮಾಡಿವೆ. ಹಾಗಂತ ಇದ್ರಿಂದ ಧೃತಿಗೆಡದ ಆನೆಯು ಸಾಕಷ್ಟು ಹೋರಾಟ ನಡೆಸುತ್ತದೆ. ಸಿಂಹಿಣಿಗಳ ಮಾರಣಾಂತಿಕ ಹಿಡಿತದಿಂದ ತನ್ನನ್ನು ತಾನು ಮುಕ್ತಗೊಳಿಸಲು ನೀರಿನತ್ತ ಓಡುತ್ತದೆ. ಬಳಿಕ ಹೆಣ್ಣು ಸಿಂಹಗಳನ್ನು ಆನೆಯೊಂದೇ ಮಣಿಸುತ್ತದೆ. ಆನೆಯ ವೀರಾವೇಶದ ಓಟಕ್ಕೆ ಸಿಂಹಿಣಿಗಳು ಹೆದರಿ ಓಟಕ್ಕಿತ್ತಿವೆ.
ಒಂಟಿ ಆನೆಯು 14 ಸಿಂಹಿಣಿಗಳನ್ನು ಗೆಲ್ಲುತ್ತದೆ. ಕಾಡಿನ ರಾಜ ಯಾರಾಗಿರಬೇಕು? ಎಂದು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ನೆಟ್ಟಿಗರು ಆನೆಯ ಧೈರ್ಯವನ್ನು ಕಂಡು ಬೆರಗಾಗಿದ್ದಾರೆ. ಆನೆಯೊಂದೇ ಅಷ್ಟು ಸಿಂಹಿಣಿಗಳೊಂದಿಗೆ ಹೋರಾಡಿದ್ದನ್ನು ಕಂಡು ಅಚ್ಚರಿವ್ಯಕ್ತಪಡಿಸಿದ್ದಾರೆ.