ನವವಧು ಆಲಿಯಾ ಭಟ್ ಇತ್ತೀಚೆಗೆ ರಣಬೀರ್ ಕಪೂರ್ ಜೊತೆಗಿನ ಮದುವೆಯ ನಂತರ ಮೊದಲ ಬಾರಿಗೆ ನಗರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ತಮ್ಮ ಕೆಲಸವನ್ನು ಪುನರಾರಂಭಿಸಿದ್ದಾರೆ. ಆದರೆ, ಈಗಷ್ಟೇ ಮದುವೆಯಾಗಿರುವ ಅವರು ನೆಟ್ಟಿಗರಿಂದ ಟ್ರೋಲ್ ಗೆ ಒಳಗಾಗಿದ್ದಾರೆ.
ಮದುವೆಯಾದ ಬಳಿಕ ಆಲಿಯಾ ಬೇಬಿ ಪಿಂಕ್ ಸಲ್ವಾರ್ ಕಮೀಜ್ ಮತ್ತು ದುಪಟ್ಟಾದಲ್ಲಿ ಎಂದಿನಂತೆ ಸುಂದರವಾಗಿ ಕಾಣುತ್ತಿದ್ದರು. ಫ್ಲೈಟ್ಗೆ ಹೊರಡುವಾಗ ನಟಿ ಫೋಟೋಗ್ರಾಫರ್ ಗಳತ್ತ ಕೈ ಬೀಸಿ ನಗೆ ಬೀರಿದ್ದಾರೆ. ಈ ವಿಡಿಯೋ ಕೆಲವೇ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಣಬೀರ್ ಮತ್ತು ಆಲಿಯಾ ಅವರ ಅಭಿಮಾನಿಗಳು ನಟಿಯ ಮೇಲೆ ಪ್ರೀತಿಯನ್ನು ಸುರಿಸಿದ್ದಾರೆ. ಆದರೆ, ಆಲಿಯಾ ಸಿಂಧೂರ ಧರಿಸದಿದ್ದನ್ನು ನೆಟ್ಟಿಗರು ಗಮನಿಸಿದ್ದಾರೆ. ಅಷ್ಟೇ ಅಲ್ಲ, ಮಧುಮಗಳೆಂದರೆ ಕೈ ತುಂಬಾ ಗೋರಂಟಿ (ಮದರಂಗಿ) ಇಡೋದು ಸಾಮಾನ್ಯ. ಆದರೆ, ಆಲಿಯಾ ಕೈಲಿ ಕಡಿಮೆ ಗೋರಂಟಿ ಸೇರಿದಂತೆ ಎಲ್ಲದಕ್ಕೂ ನಟಿಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.