alex Certify ಸಿಂಗಲ್ ಪ್ರೀಮಿಯಂ ಕಟ್ಟಿ 12,000 ರೂ. ಪಿಂಚಣಿ ಪಡೆಯಿರಿ…..! ಎಲ್‌ಐಸಿ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಗಲ್ ಪ್ರೀಮಿಯಂ ಕಟ್ಟಿ 12,000 ರೂ. ಪಿಂಚಣಿ ಪಡೆಯಿರಿ…..! ಎಲ್‌ಐಸಿ ಆಫರ್

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹೂಡಿಕೆದಾರರು ತಮ್ಮ ನಿವೃತ್ತಿಯ ಅವಧಿಯನ್ನು ಸುರಕ್ಷಿತವಾಗಿರಿಸಲು ವಿವಿಧ ಪಾಲಿಸಿಗಳನ್ನು ನೀಡುತ್ತದೆ.
ಇದರಲ್ಲಿ ಎಲ್ ಐಸಿ ಸರಳ್ ಪಿಂಚಣಿ ಯೋಜನೆ ವಿಶೇಷವೆನಿಸಿದೆ. ಈ ಯೋಜನೆಯಡಿ ಒಂದು ವರ್ಷದಲ್ಲಿ ಕನಿಷ್ಠ ರೂ 12,000 ಪಿಂಚಣಿ ಪಡೆಯಬಹುದು.

ಒಂದು ದೊಡ್ಡ ಮೊತ್ತದ ಪಾವತಿಯ ಮೇಲೆ ಲಭ್ಯವಿರುವ ಎರಡು ಆಯ್ಕೆಗಳಿಂದ ವಾರ್ಷಿಕ ಪಿಂಚಣಿ ಪ್ರಕಾರವನ್ನು ಆಯ್ಕೆ ಮಾಡಲು ಹೂಡಿಕೆದಾರರಿಗೆ ಈ ಯೋಜನೆ ಅವಕಾಶ ನೀಡುತ್ತದೆ.

ಎಲ್ಐಸಿ ಸರಳ್ ಪಿಂಚಣಿ ಯೋಜನೆಯಲ್ಲಿ ಆನ್ಯುಯಿಟಿ ದರಗಳು ಪಾಲಿಸಿಯ ಪ್ರಾರಂಭದಲ್ಲಿ ಖಾತರಿಪಡಿಸಲಾಗುತ್ತದೆ. ಈ ಸರಳ್ ಪಿಂಚಣಿ ಯೋಜನೆ ಅಡಿಯಲ್ಲಿ 2 ಆಯ್ಕೆಗಳು ಇರುತ್ತದೆ.‌

ಆಯ್ಕೆ 1: ಹೂಡಿಕೆದಾರರಿಗೆ ಖರೀದಿ ಬೆಲೆಯ ಶೇ. 100ರಷ್ಟು ಲಾಭದೊಂದಿಗೆ ವಾರ್ಷಿಕ ಒಮ್ಮೆ ಪಾವತಿ ಆಗುವ ವಿಧಾನ ಆಯ್ಕೆ ಮಾಡಲು ಅನುಮತಿಸುತ್ತದೆ. ಮರಣದ ಸಂದರ್ಭದಲ್ಲಿ, ವಾರ್ಷಿಕ ಪಾವತಿಯನ್ನು ನಿಲ್ಲಿಸಲಾಗುತ್ತದೆ ಮತ್ತು ಖರೀದಿ ಬೆಲೆಯ ಶೇ.100 ಅನ್ನು ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿಗಳಿಗೆ ಪಾವತಿಸಲಾಗುತ್ತದೆ.

BIG BREAKING: ಒಂದೇ ದಿನದಲ್ಲಿ 2,827 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; 19,067 ಸಕ್ರಿಯ ಪ್ರಕರಣ ದಾಖಲು

ಆಯ್ಕೆ 2: ಎಲ್‌ಐಸಿ ಸರಳ್ ಪಿಂಚಣಿ ಯೋಜನೆ ಅಡಿಯಲ್ಲಿ ಎರಡನೇ ಆಯ್ಕೆಯನ್ನು ಆರಿಸಿಕೊಂಡರೆ ವಾರ್ಷಿಕ ಪಾವತಿ (ಅನ್ಯುಯಿಟಿ) ಆತನ ಮತ್ತು/ಅಥವಾ ಸಂಗಾತಿಯು ಜೀವಂತವಾಗಿರುವವರೆಗೆ ಖಚಿತಪಡಿಸುತ್ತದೆ.

40 ವರ್ಷದಿಂದ 80 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಎಲ್ಐಸಿ ಸರಳ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಹೂಡಿಕೆದಾರರು ತಿಂಗಳಿಗೆ ಕನಿಷ್ಠ ಮಾಸಿಕ ಪಿಂಚಣಿಯನ್ನು ರೂ 1000 ಅಥವಾ ವಾರ್ಷಿಕವಾಗಿ ರೂ 12000 ರೂ. ಆಯ್ಕೆ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...