ಸಾಸಿವೆ ಎಣ್ಣೆ ಆರೋಗ್ಯಕ್ಕೆ ಉತ್ತಮ. ಆದರೆ ಸಾಸಿವೆ ಎಣ್ಣೆಯ ಪ್ರಮಾಣವನ್ನು ಹೆಚ್ಚಿಸಲು ಅರ್ಜಿಮೊನ್ ಎಣ್ಣೆಯನ್ನು ಬಳಸಲಾಗುತ್ತದೆ. ಇದರಿಂದ ಕೆಂಪು ರಕ್ತ ಕಣಗಳ ಸಾವಿಗೆ ಕಾರಣವಾಗಬಹುದು. ಅರ್ಜಿಮೊನ್ ಎಣ್ಣೆಯಲ್ಲಿರುವ ವಿಷತ್ವದಿಂದ ದೇಹಕ್ಕೆ ಹಾನಿ ಉಂಟಾಗುತ್ತದೆ. ಹಾಗಾದ್ರೆ ಈ ಎಣ್ಣೆಯನ್ನು ಅಸಲಿಯೇ? ನಕಲಿಯೇ? ಎಂದು ಕಂಡು ಹಿಡಿಯುವುದು ಹೇಗೆಂದು ತಿಳಿಯೋಣ.
ಅಸಲಿ ಹಾಗೂ ನಕಲಿ ತೈಲವನ್ನು ಕಂಡು ಹಿಡಿಯಲು, 5 ಮಿಲಿ ಪ್ರಮಾಣದ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಟೆಸ್ಟ್ ಟ್ಯೂಬ್ ಗೆ ಸುರಿದು ಅದಕ್ಕೆ 5 ಮಿಲಿ ನೈಟ್ರಿಕ್ ಆಮ್ಲವನ್ನು ಸೇರಿಸಿ ಮಿಕ್ಸ್ ಮಾಡಿ.
ಹೀಗೆ ಮಾಡಿದಾಗ ಅದರ ಬಣ್ಣದಲ್ಲಿ ಬದಲಾವಣೆಯಾಗದಿದ್ದರೆ ಅದು ಅಸಲಿ ತೈಲ. ಒಂದು ವೇಳೆ ಅದರ ಬಣ್ಣ ಕಿತ್ತಳೆ ಹಳದಿ ಬಣ್ಣದಿಂದ ಕೆಂಪು ಬಣ್ಣಕ್ಕೆ ಬದಲಾದರೆ ಅದು ನಕಲಿ ತೈಲ ಎಂದು ತಿಳಿಸಿದ್ದಾರೆ.