ಮಾರುತಿ ಸುಜುಕಿ ಭಾರತದ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್-10 ಕಾರುಗಳಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳೇ ಹೆಚ್ಚಾಗಿವೆ. 2022ರ ಜುಲೈ ತಿಂಗಳಿನಲ್ಲೂ ಈ ಕಂಪನಿಯ ಸಾಕಷ್ಟು ಕಾರುಗಳು ಮಾರಾಟವಾಗಿವೆ.
ವಾರ್ಷಿಕ ಆಧಾರದ ಮೇಲೆ ಮಾರಾಟ ಸಾವಿರ ಪಟ್ಟು ಹೆಚ್ಚಾಗಿದೆ. ಅಷ್ಟಕ್ಕೂ ಅತಿ ಹೆಚ್ಚು ಸೇಲ್ ಆಗಿರೋ ಕಾರು ಯಾವುದು ಗೊತ್ತಾ? ಮಾರುತಿ ಸುಜುಕಿ ಸೆಲೆರಿಯೊ. ಕಂಪನಿಯು ಜುಲೈ ತಿಂಗಳಲ್ಲಿ ಒಟ್ಟು 6854 ಸೆಲೆರಿಯೊ ಯುನಿಟ್‌ಗಳನ್ನು ಮಾರಾಟ ಮಾಡಿದೆ.
2021ರ ಜುಲೈನಲ್ಲಿ ಕೇವಲ 2 ಕಾರುಗಳು ಮಾರಾಟವಾಗಿದ್ದವು. ಹೊಸ ಮಾದರಿಯ ಸೆಲೆರಿಯೊ ಕಾರನ್ನು ಬಿಡುಗಡೆ ಮಾಡಿದ ಬಳಿಕ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಇದರ ಸಿಎನ್‌ಜಿ ಆವೃತ್ತಿ ಕೂಡ ಲಭ್ಯವಿದೆ. ಮಾರುತಿ ಸುಜುಕಿ ಸೆಲೆರಿಯೊ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರು ಎಂಬುದು ವಿಶೇಷ. ಸೆಲೆರಿಯೊ CNG 35.60 ಮೈಲೇಜ್ ನೀಡುತ್ತದೆ. ಪೆಟ್ರೋಲ್ ಕಾರು 26.68 ಕಿ.ಮೀವರೆಗೆ ಮೈಲೇಜ್ ನೀಡಬಹುದು.
ಮಾರುತಿ ಸುಜುಕಿ ಸೆಲೆರಿಯೊ ಬೆಲೆ 5.25 ಲಕ್ಷ ರೂಪಾಯಿಯಿಂದ ಆರಂಭ. ಇದರ ಸಿಎನ್‌ಜಿ ಆವೃತ್ತಿಯ ಬೆಲೆ 6 ಲಕ್ಷ ರೂಪಾಯಿ. ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಒಟ್ಟು 6 ಬಣ್ಣಗಳಲ್ಲಿ ಸೆಲೆರಿಯೊ ಕಾರು ಲಭ್ಯವಿದೆ. 15 ಇಂಚಿನ ಅಲಾಯ್ ಚಕ್ರಗಳನ್ನು ಅಳವಡಿಸಲಾಗಿದೆ. ಸೆಲೆರಿಯೊ ಕಾರು ಖರೀದಿಸುವವರಿಗೆ 50 ಸಾವಿರ ರೂಪಾಯಿವರೆಗಿನ ಆಫರ್‌ಗಳನ್ನು ಸಹ ಕಂಪನಿ ಕೊಡುತ್ತಿದೆ.