ವಿಶ್ವದಾದ್ಯಂತ ಅನೇಕ ಸಂಪ್ರದಾಯ, ಪದ್ಧತಿ ಜಾರಿಯಲ್ಲಿದೆ. ಈಗ್ಲೂ ಜನರು ಅನೇಕ ಪದ್ಧತಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಇಂಗ್ಲೆಂಡ್ ನ ವೇಲ್ಸ್ ವಿಚಿತ್ರ ಪದ್ಧತಿ ಜಾರಿಯಲ್ಲಿದೆ. ಸಾವನ್ನಪ್ಪಿದವರ ಹಲ್ಲುಗಳನ್ನು ಕಿತ್ತಿಟ್ಟುಕೊಳ್ಳಲಾಗುತ್ತದೆ.
DeathTeethStory ಎಂಬ ಹೆಸರಿನ ಮಹಿಳೆ ಈ ವಿಶಿಷ್ಟ ಸಂಪ್ರದಾಯದ ಕಥೆಯನ್ನು ಹಂಚಿಕೊಂಡಿದ್ದಾರೆ. ನನ್ನ ಗಂಡನ ಮನೆಯಲ್ಲಿ ಸಾವು ಮತ್ತು ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ವಿಚಿತ್ರ ಪದ್ಧತಿ ಜಾರಿಯಲ್ಲಿದೆ. ಯುಕೆ ನ ವೇಲ್ಸ್ ನಗರದಲ್ಲಿ ನಾವು ವಾಸವಾಗಿದ್ದಾವೆ. ಸಂಪ್ರದಾಯದ ಪ್ರಕಾರ, ಸತ್ತ ವ್ಯಕ್ತಿಯ ಹಲ್ಲುಗಳನ್ನು ಕಿತ್ತು ಅದನ್ನು ಇಟ್ಟುಕೊಳ್ಳುತ್ತಾರೆ.
ವ್ಯಕ್ತಿಗಳು ಸತ್ತಾಗ ಹಲ್ಲುಗಳನ್ನು ಕೀಳಲಾಗುತ್ತದೆ. ಸತ್ತ ವ್ಯಕ್ತಿಗೆ ಪ್ರಿಯವಾಗಿರುವ ವ್ಯಕ್ತಿಗಳಿಗೆ ಈ ಹಲ್ಲುಗಳನ್ನು ಹಂಚಲಾಗುತ್ತದೆ. ಹಲ್ಲುಗಳನ್ನು ವ್ಯಕ್ತಿಗಳು ಸುರಕ್ಷಿತವಾಗಿಟ್ಟುಕೊಂಡಿರಬೇಕು. ಜೀವನ ಪರ್ಯಂತ ಅವರು ಸಂಗ್ರಹಿಸಿಟ್ಟ ಹಲ್ಲುಗಳನ್ನು ಅವರು ಸತ್ತ ನಂತ್ರ ಅವ್ರ ಜೊತೆ ಮಣ್ಣು ಮಾಡಲಾಗುತ್ತದೆ.
ಮಹಿಳೆ ಪತಿಯ ಅಜ್ಜಿ ಸಾವನ್ನಪ್ಪಿದಾಗ ಹಲ್ಲುಗಳನ್ನು ಕಿತ್ತಿದ್ದರಂತೆ. ಮಹಿಳೆಗೆ ಹಲ್ಲುಗಳನ್ನು ಇಟ್ಟುಕೊಳ್ಳಲು ನೀಡಿದ್ದರಂತೆ. ಆದ್ರೆ ಮಹಿಳೆ ಹಲ್ಲುಗಳನ್ನು ಇಟ್ಟುಕೊಳ್ಳಲು ನಿರಾಕರಿಸಿದ್ದಳಂತೆ. ಇದು ಕುಟುಂಬಸ್ಥರ ಕೋಪಕ್ಕೆ ಕಾರಣವಾಗಿತ್ತಂತೆ. ನಾನು ಸಾವನ್ನಪ್ಪಿದಾಗ ನನ್ನ ಹಲ್ಲುಗಳನ್ನು ಕೀಳಬೇಡಿ ಎಂದು ಮಹಿಳೆ ಹೇಳಿದ್ದಾಳಂತೆ. ಇದೊಂದು ಅಸಂಬದ್ಧ ಪದ್ಧತಿ ಎಂದು ಮಹಿಳೆ ಹೇಳಿದ್ದಾಳೆ.