ಕೋಲಾರದಲ್ಲಿ ಮೆದುಳು ಸ್ಟ್ರೋಕ್‌ನಿಂದ ಮೃತಪಟ್ಟ ಮಹಿಳೆಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಹಿಳೆಯ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬಸ್ಥರು 8 ಮಂದಿಗೆ ಮರುಜೀವ ನೀಡಿದ್ದಾರೆ. ಆಗಸ್ಟ್ 27ರಂದು ಶ್ವೇತಾಗೆ ಬ್ರೈನ್ ಸ್ಟ್ರೋಕ್ ಆಗಿತ್ತು.
ನಂತರ ಆಕೆ ಚೇತರಿಸಿಕೊಳ್ಳಲೇ ಇಲ್ಲ. ಪತ್ನಿಯನ್ನು ಹೇಗಾದ್ರೂ ಉಳಿಸಿಕೊಳ್ಳಬೇಕೆಂದು ಪತಿ ಹರೀಶ್ ಸಾಕಷ್ಟು ಪ್ರಯತ್ನಿಸಿದ್ದಾರೆ. ಹತ್ತಾರು ಆಸ್ಪತ್ರೆಗಳಿಗೆ ಅಲೆದಿದ್ದಾರೆ, ಆದ್ರೂ ಪ್ರಯೋಜನವಾಗಿಲ್ಲ.
ಆಗಸ್ಟ್ 28ರಂದು ಶ್ವೇತಾರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ತರಲಾಗಿತ್ತು. ಆಗಸ್ಟ್ 31 ರಂದು ಆಕೆಯ ಮೆದುಳಿನ ಕಾಂಡ ಸತ್ತು ಹೋಗಿತ್ತು. ಹಾಗಾಗಿ ಶ್ವೇತಾಳ ಲಿವರ್, ಕಿಡ್ನಿಗಳು, ಹೃದಯ, ಚರ್ಮ ಮತ್ತು ಕಾರ್ನಿಯಾಗಳನ್ನು ಮರುಜೋಡಣೆಗಾಗಿ ಸಂಗ್ರಹಿಸಲಾಗಿದೆ.
ಹೃದಯದ ಕವಾಟವನ್ನು ಜಯದೇವ ಆಸ್ಪತ್ರೆಯಲ್ಲಿ ಸಂಗ್ರಹಿಸಿಡಲಾಗಿದೆ. ಚರ್ಮವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಕಾರ್ನಿಯಾಗಳನ್ನು ಪ್ರಭಾ ಐ ಕ್ಲಿನಿಕ್‌ಗೆ ದಾನ ಮಾಡಲಾಗಿದೆ. ಲಿವರ್ ಮತ್ತು ಕಿಡ್ನಿಗಳನ್ನು ಬೇರೆ ರೋಗಿಗಳಿಗೆ ಅಳವಡಿಸಲಾಗಿದೆ. ಈ ರೀತಿ ಶ್ವೇತಾ 8 ಜನರ ಬದುಕಿಗೆ ಬೆಳಕಾಗಿದ್ದಾರೆ.