ಚಂಡೀಗಢ: ಬ್ರೈನ್ ಡೆಡ್ ಆದ ಪರಿಣಾಮ ಮೃತಪಟ್ಟ ಮಗುವೊಂದು ಮೂವರಿಗೆ ಜೀವದಾನ ನೀಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ದ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ನಲ್ಲಿ ಮೃತ ಮಗುವಿನ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದು, ಮೂವರು ರೋಗಿಗಳಿಗೆ ಅಳವಡಿಸಲಾಗಿದೆ.
ಬರ್ನಾಲಾ ನಿವಾಸಿಯಾಗಿರುವ 4 ವರ್ಷದ ಬಾಲಕ ಗುರ್ಜೋತ್ ತಲೆಗೆ ಗಂಭೀರವಾದ ಗಾಯವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಪಿಜಿಐ ಚಂಡೀಗಢಕ್ಕೆ ಕರೆತರಲಾಯಿತು. ಆದರೆ ಏಪ್ರಿಲ್ 9 ರಂದು ಮಗುವಿನ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದ್ದರು.
ಮಗು ಕಳೆದುಕೊಂಡ ನೋವಿನಲ್ಲಿದ್ದರೂ ಕುಟುಂಬವು ಕಸಿ ಅಗತ್ಯವಿರುವವರಿಗೆ ಅಂಗಾಂಗಗಳನ್ನು ದಾನ ಮಾಡಿದೆ. ಗುರ್ಜೋತ್ ಕುಟುಂಬದ ಕಾರ್ಯಕ್ಕೆ ಪಿಜಿಐ ನಿರ್ದೇಶಕ ಪ್ರೊ. ಸುರ್ಜಿತ್ ಸಿಂಗ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಯಕೃತ್, ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿಯನ್ನು ದಾನ ಮಾಡಲಾಗಿದೆ.