ಉಡುಪಿ : ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಗುಡಾಲು ಹಳ್ಳಿಯ ಗುಮ್ಮನೂರು ರಸ್ತೆಯಲ್ಲಿ ಇತ್ತೀಚೆಗಷ್ಟೇ ಇಂದ್ರಮ್ಮ ಬಿ.ಎಂ(57) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಕುಟುಂಬಸ್ಥರು ಅದರ ನೋವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. 6 ಜನರಿಗೆ ಅಂಗಾಂಗ ದಾನ ಮಾಡುವ ಮೂಲಕ ಅವರ ಬದುಕಿಗೆ ಬೆಳಕಾಗಿದ್ದಾರೆ.
ಹೀಗಾಗಿ ಇಂದ್ರಮ್ಮ ಅವರ ಎರಡು ಮೂತ್ರ ಪಿಂಡಗಳು, ಎರಡು ಕಾರ್ನಿಯಾಗಳು, ಕಣ್ಣು ಗುಡ್ಡೆಗಳು, ಹೃದಯ, ಹೃದಯ ಕವಾಟ ಹಾಗೂ ಯಕೃತ್ ನ್ನು ದಾನವಾಗಿ ಪಡೆಯಲಾಗಿದೆ ಎಂದು ಡಾ. ಶೆಟ್ಟಿ ತಿಳಿಸಿದ್ದಾರೆ.