ತಾಯಿ ಲಕ್ಷ್ಮಿ ಪ್ರಸನ್ನಗೊಳಿಸಲು ಧನ್ ತೇರಸ್ ಹಾಗೂ ದೀಪಾವಳಿ ಶುಭಕರ. ಧನ್ ತೇರಸ್ ಹಾಗೂ ದೀಪಾವಳಿ ದಿನ ಲಕ್ಷ್ಮಿ ಪ್ರಸನ್ನಳಾದ್ರೆ ಆರ್ಥಿಕ ಅಭಿವೃದ್ಧಿಯಾಗಲಿದೆ. ಸಾಲ ಕಡಿಮೆಯಾಗಿ ಸುಖ ಸಂಸಾರ ನಿಮ್ಮದಾಗಲಿದೆ.
ತಾಯಿ ಲಕ್ಷ್ಮಿ ಮಾಲ್ಪುವಾ ಪ್ರಿಯಳು. ದೀಪಾವಳಿಯಂದು ಮಾಲ್ಪುವಾ ತಯಾರಿಸಿ ತಾಯಿ ಲಕ್ಷ್ಮಿಗೆ ಅರ್ಪಿಸಿ. ಪ್ರಸಾದದ ರೂಪದಲ್ಲಿ ಅದನ್ನು ಸ್ವೀಕರಿಸಿ. ಶಾಸ್ತ್ರಗಳ ಪ್ರಕಾರ ಅದರಿಂದ ಆರೋಗ್ಯ ಹಾಗೂ ಸಮೃದ್ಧಿಯಲ್ಲಿ ವೃದ್ಧಿಯಾಗುತ್ತದೆ. ಸಾಲ ತೀರಿಸಲು ನೆರವಾಗುತ್ತದೆ.
ಧನ್ ತೇರಸ್ ಹಾಗೂ ದೀಪಾವಳಿ ದಿನದಂದು ಸಂಜೆ ಆಲದ ಮರವನ್ನು ಸೆಣಬಿನ ದಾರದಲ್ಲಿ ಕಟ್ಟಬೇಕು. ಇದ್ರಿಂದ ಅಚಾನಕ್ ಧನ ಲಾಭವಾಗಲಿದೆ.
ಆರ್ಥಿಕ ವೃದ್ಧಿ ಬಯಸುವವರು ಧನ್ ತೇರಸ್ ಹಾಗೂ ದೀಪಾವಳಿಯಲ್ಲಿ ಒಂದು ದಿನ ಮಣ್ಣಿನ ಮಡಿಕೆಯಲ್ಲಿ ಜೇನು ತುಪ್ಪವನ್ನು ಹಾಕಿ ನಿರ್ಜನ ಪ್ರದೇಶದಲ್ಲಿಟ್ಟು ಬನ್ನಿ.
ಧನ್ ತೇರಸ್ ಹಾಗೂ ದೀಪಾವಳಿ ದಿನ ಪೊರಕೆಯನ್ನು ಖರೀದಿ ಮಾಡಿ. ಪೂಜೆಗಿಂತ ಮೊದಲು ಶಾಸ್ತ್ರಕ್ಕೆ ಪೊರಕೆಯನ್ನು ಬಳಸಿ ಬದಿಗೆ ತೆಗೆದಿಡಿ. ಮರು ದಿನದಿಂದ ಪೊರಕೆಯನ್ನು ಬಳಸಿ. ಇದ್ರಿಂದ ದರಿದ್ರ ದೂರವಾಗಿ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ.