ರಾಮಾಯಣದಲ್ಲಿ ಭಗವಂತ ರಾಮನಿಂದ ರಾವಣನ ಅಂತ್ಯವಾಗುತ್ತದೆ. ರಾವಣ ಒಬ್ಬ ಮಹಾನ್ ಪಂಡಿತ. ಜೊತೆಗೆ ಶಿವ ಭಕ್ತ. ಭಗವಂತ ಶಿವನಿಂದ ರಾವಣ ಅನೇಕ ವರಗಳನ್ನು ಪಡೆದಿದ್ದ. ರಾಮನ ಕೈನಲ್ಲಿ ಮರಣ ಹೊಂದಿದ ರಾವಣ ಸಾಯುವ ವೇಳೆ ರಾಮನ ಸಹೋದರ ಲಕ್ಷ್ಮಣನಿಗೆ ಜೀವನಕ್ಕೆ ಸಂಬಂಧಿಸಿದ್ದ ಕೆಲವೊಂದು ಬಹುಮುಖ್ಯ ವಿಷಯಗಳನ್ನು ಹೇಳಿದ್ದಾನೆ.
ರಾವಣ ಕೊನೆಯುಸಿರೆಳೆಯುತ್ತಿರುವ ವೇಳೆ ರಾಮ, ಲಕ್ಷ್ಮಣನನ್ನು ಕರೆದು ರಾವಣನಿಂದ ಸಫಲ ಜೀವನದ ಮಂತ್ರ ಪಡೆಯುವಂತೆ ಹೇಳಿದ್ದಾನೆ. ಅಣ್ಣನ ಆಜ್ಞೆಯಂತೆ ರಾವಣನ ಬಳಿ ಹೋದ ಲಕ್ಷ್ಮಣನಿಗೆ ರಾವಣ ಮೂರು ಬಹುಮುಖ್ಯ ಮಾತುಗಳನ್ನು ಹೇಳಿದ್ದಾನೆ.
ಮೊದಲನೇಯದಾಗಿ ಶುಭ ಕಾರ್ಯಗಳನ್ನು ಮಾಡಬಯಸಿದ್ದರೆ ತಕ್ಷಣ ಮಾಡಬೇಕು. ಅದ್ರಲ್ಲಿ ವಿಳಂಬ ಮಾಡಬಾರದು. ನಾನು ಶ್ರೀರಾಮನನ್ನು ತಲುಪಲು ತಡ ಮಾಡಿದೆ ಎಂದು ಸಾಯುವ ಮೊದಲು ಲಕ್ಷ್ಮಣನಿಗೆ ರಾವಣ ಹೇಳಿದ್ದಾನೆ.
ಶತ್ರುಗಳನ್ನು ಎಂದೂ ದುರ್ಬಲರು ಎಂದುಕೊಳ್ಳಬೇಡ. ನಾನು ಕೊನೆಯವರೆಗೂ ರಾಮನನ್ನು ಹಾಗೆ ನೋಡಿದೆ. ಇದಕ್ಕೆ ಈ ಶಿಕ್ಷೆ ಎಂದಿದ್ದಾನೆ ರಾವಣ.
ಜೀವನದ ಯಾವುದೇ ರಹಸ್ಯವನ್ನು ಬೇರೆಯವರ ಮುಂದೆ ಹೇಳಿಕೊಳ್ಳಬಾರದು. ನನ್ನ ಸಾವಿನ ರಹಸ್ಯ ವಿಭೀಷಣನಿಗೆ ತಿಳಿದಿತ್ತು. ಇದು ನನ್ನ ಜೀವನದ ಅತಿ ದೊಡ್ಡ ತಪ್ಪು ಎಂದು ರಾವಣ, ಲಕ್ಷ್ಮಣನಿಗೆ ಹೇಳಿದ್ದಾನೆ.