ಇತ್ತೀಚಿನ ದಿನಗಳಲ್ಲಿ ಇಡೀ ಜಗತ್ತಿನಲ್ಲೇ ಅತಿಯಾಗಿ ಕಾಡುತ್ತಿರುವುದು ಬೊಜ್ಜಿನ ಸಮಸ್ಯೆ. ಸ್ಥೂಲಕಾಯತೆಯಿಂದ ಕೋಟ್ಯಾಂತರ ಮಂದಿ ತೊಂದರೆಗೀಡಾಗಿದ್ದಾರೆ. ಬೊಜ್ಜು ಕರಗಿಸುವ ಇಚ್ಛೆ ಇರುವವರು, ಅದಕ್ಕಾಗಿ ಪ್ರಯತ್ನಪಡುತ್ತಿರುವವರು ಕೆಲವು ಅಭ್ಯಾಸಗಳನ್ನು ಬದಲಾಯಿಸಬೇಕು. ಡಯಟ್ ಮತ್ತು ಜಿಮ್‌ನಲ್ಲಿ ವರ್ಕೌಟ್ ಮಾಡಿದರೂ ಬೊಜ್ಜು ಕಡಿಮೆಯಾಗದೇ ಇರುವುದಕ್ಕೆ ಈ ಅಭ್ಯಾಸಗಳೇ ಕಾರಣ.
ಕೆಲವರು ಸಾಯಂಕಾಲ ಸೇವಿಸುವ ಆಹಾರ ಮತ್ತು ಪಾನೀಯಗಳೇ ಅವರಿಗೆ ಮುಳುವಾಗುತ್ತದೆ. ಇದರಿಂದಾಗಿ ಬೊಜ್ಜು ಕಡಿಮೆಯಾಗುವುದಿಲ್ಲ. ಇಷ್ಟು ಮಾತ್ರವಲ್ಲ, ತಡರಾತ್ರಿಯವರೆಗೆ ಎಚ್ಚರವಾಗಿರುವುದು ಕೂಡ ತೂಕ ಹೆಚ್ಚಾಗಲು ಕಾರಣ. ಹಗಲಿನಲ್ಲಿ ಜಿಮ್‌ನಲ್ಲಿ ಬೆವರು ಹರಿಸಿ, ಸಂಜೆ ಅನಾರೋಗ್ಯಕರ ತಿನಿಸುಗಳನ್ನು ತಿನ್ನುವುದರಿಂದ ಬೊಜ್ಜು ಕಡಿಮೆಯಾಗುವುದಿಲ್ಲ.
ಅಧಿಕ ಕ್ಯಾಲೋರಿ ಇರುವ ಆಹಾರ: ರಾತ್ರಿ ವೇಳೆ ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಬೇಕು. ಅಧಿಕ ಕ್ಯಾಲೋರಿ ಇರುವ ಆಹಾರವನ್ನು ಸೇವಿಸುತ್ತಿದ್ದರೆ ತೂಕ ಕಡಿಮೆಯಾಗುವುದಿಲ್ಲ. ಸಂಜೆ 7 ಗಂಟೆಯ ನಂತರ ಹೆಚ್ಚಿನ ಕ್ಯಾಲೋರಿ ಇರುವ ತಿನಿಸುಗಳಿಂದ ದೂರವಿರಬೇಕು.
ಕೆಫೀನ್ ಹೊಂದಿರುವ ಪಾನೀಯ : ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಸಂಜೆ ಕೆಫೀನ್ ಹೊಂದಿರುವ ಪಾನೀಯಗಳನ್ನು ಕುಡಿಯುವುದನ್ನು ನಿಲ್ಲಿಸಬೇಕು. ಕಾಫಿ ಅಥವಾ ಎನರ್ಜಿ ಡ್ರಿಂಕ್ಸ್‌ಗಳಿಂದ ದೂರವಿರಿ. ಈ ಪಾನೀಯಗಳಿಂದಾಗಿ ನಿದ್ರಾ ಭಂಗ ಉಂಟಾಗುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುವ ಪ್ರಕ್ರಿಯೆಗೆ ಇವು ಅಡ್ಡಿಯಾಗುತ್ತವೆ.
ತಡರಾತ್ರಿವರೆಗೂ ಎದ್ದಿರುವುದು: ಇಂಟರ್‌ನೆಟ್ ಮತ್ತು ಮೊಬೈಲ್‌ನ ಈ ಜಗತ್ತು ಜನರನ್ನು ತಡರಾತ್ರಿವರೆಗೂ ಎಚ್ಚರವಾಗಿರುವಂತೆ ಮಾಡುತ್ತಿದೆ. ತೂಕ ಕಡಿಮೆಯಾಗಬೇಕೆಂದರೆ ಈ ಅಭ್ಯಾಸವನ್ನು ತಕ್ಷಣ ಬದಲಾಯಿಸಿಕೊಳ್ಳಿ. ರಾತ್ರಿ ತಡವಾಗಿ ಮಲಗುವುದರಿಂದ ತೂಕ ಹೆಚ್ಚಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸಿದರೆ ಚೆನ್ನಾಗಿ ನಿದ್ದೆ ಮಾಡುವುದು ಕೂಡ ಬಹಳ ಮುಖ್ಯ.
ತಡರಾತ್ರಿ ಊಟ: ಕೆಲವರು ರಾತ್ರಿ 11 ಗಂಟೆ ಮೇಲೆ ಊಟ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ತಡರಾತ್ರಿಯಲ್ಲಿ ತಿನ್ನುವುದರಿಂದ ತೂಕ ಹೆಚ್ಚುತ್ತದೆ. ಏಕೆಂದರೆ ತಿಂದ ತಕ್ಷಣ ನಾವು ಮಲಗಿಬಿಡುತ್ತೇವೆ, ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಈ ಎಲ್ಲಾ ಅಭ್ಯಾಸಗಳನ್ನು ಬಿಟ್ಟರೆ ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.