alex Certify ಸಾಮಾನ್ಯ ತಾಪಮಾನದಲ್ಲೂ ವಿಪರೀತ ಚಳಿ ಎನಿಸುತ್ತಿದೆಯೇ….? ಇದು ಗಂಭೀರ ಕಾಯಿಲೆಯ ಸಂಕೇತವೂ ಇರಬಹುದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾನ್ಯ ತಾಪಮಾನದಲ್ಲೂ ವಿಪರೀತ ಚಳಿ ಎನಿಸುತ್ತಿದೆಯೇ….? ಇದು ಗಂಭೀರ ಕಾಯಿಲೆಯ ಸಂಕೇತವೂ ಇರಬಹುದು….!

ಚಳಿಗಾಲದಲ್ಲಿ ಕೈಕಾಲು ತಣ್ಣಗಾಗುವುದು ಸಹಜ. ಆದರೆ ಕೆಲವರಿಗೆ ವಿಪರೀತ ಚಳಿಯ ಅನುಭವವಾಗುತ್ತದೆ. ಈ ವಿಷಯವನ್ನು ನಿರ್ಲಕ್ಷಿಸಬೇಡಿ. ಇದರ ಹಿಂದೆ ಅನೇಕ  ಕಾರಣಗಳಿರಬಹುದು. ಅತಿಯಾದ ಚಳಿಯ ಅನುಭವ ಅನಾರೋಗ್ಯದ ಸಂಕೇತವೂ ಇರಬಹುದು. ಅತಿಯಾದ ಶೀತಕ್ಕೆ ಕಾರಣಗಳು ಯಾವುವು ಅನ್ನೋದನ್ನು ನೋಡೋಣ.

ಮಧುಮೇಹ: ಮಧುಮೇಹಿಗಳ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಅತಿಯಾದ ಶೀತದ ಅನುಭವವಾಗುತ್ತದೆ. ಸಾಮಾನ್ಯ ತಾಪಮಾನದಲ್ಲೂ ವಿಪರೀತ ಚಳಿಯಾಗುತ್ತಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕು.

ಕಬ್ಬಿಣದ ಕೊರತೆ: ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತವೆ. ಹಾಗಾಗಿ ಚಳಿಗಾಲದಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ರಕ್ತದ ಕೊರತೆಯಿದ್ದರೂ ಅತಿಯಾದ ಚಳಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹಸಿರು ತರಕಾರಿಗಳು, ಹಾಲು, ಬೀಟ್ರೂಟ್ ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ವಿಟಮಿನ್ ಬಿ 12 ಕೊರತೆ: ಮಹಿಳೆಯರ ದೇಹದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಏಕೆಂದರೆ ಮಹಿಳೆಯರು ಮನೆಯ ಜವಾಬ್ದಾರಿಯಲ್ಲಿ ತಮ್ಮ ಆಹಾರದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರ ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿರುತ್ತದೆ. ಈ ವಿಟಮಿನ್‌ ಕೊರತೆಯಿಂದ ಹೆಚ್ಚು ಚಳಿಯಾಗುತ್ತದೆ.

ಅಸಮರ್ಪಕ ರಕ್ತ ಪರಿಚಲನೆ: ನಿಮ್ಮ ಕೈ ಮತ್ತು ಪಾದಗಳೆಲ್ಲ ತಣ್ಣಗಾಗಿ ಭಯಂಕರ ಚಳಿಯಾಗುತ್ತಿದ್ದರೆ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿಲ್ಲ ಎಂದರ್ಥ. ಇದೇ ರೀತಿಯ ಅನುಭವವಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರನ್ನು ಭೇಟಿ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...