ಕಾಲೇಜು ಪಠ್ಯಪುಸ್ತಕದಲ್ಲಿ ವರದಕ್ಷಿಣೆಯ ಅರ್ಹತೆ ಎಂಬ ಅಧ್ಯಾಯವು ಸಾಮಾಜಿಕ ಮಾಧ್ಯಮವನ್ನು ಬೆಚ್ಚಿಬೀಳಿಸಿತ್ತು. ಇದೀಗ ಐಸಿಎಸ್ಇ ಸಿಲೆಬಸ್ ನ 3ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ಮತ್ತೊಂದು ಪುಟವು ವೈರಲ್ ಆಗಿದ್ದು, ನೆಟ್ಟಿಗರು ಇಷ್ಟಪಟ್ಟಿದ್ದಾರೆ.
ಪಠ್ಯಪುಸ್ತಕದ ಅಧ್ಯಾಯದಲ್ಲಿ ಹುಡುಗಿಯರು ಮತ್ತು ಹುಡುಗರ ಲಿಂಗ ಪಾತ್ರಗಳ ಬಗ್ಗೆ ಪಾಠದಲ್ಲಿದೆ. ಇದು ಐಸಿಎಸ್ಇ ಬೋರ್ಡ್‌ನ 3ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ಪಠ್ಯಪುಸ್ತಕದ ಅಧ್ಯಾಯವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿದೆ. ಬಳಕೆದಾರ ಮಮತಾ ಶರ್ಮಾ ದಾಸ್ ಅವರು ಪುಟದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಅಧ್ಯಾಯದಲ್ಲಿ ಹುಡುಗಿಯರು ಮತ್ತು ಹುಡುಗರು ಮನೆಯ ಒಳಗೆ ಮತ್ತು ಹೊರಗೆ ಆಡುವ ವಿಭಿನ್ನ ಪಾತ್ರಗಳನ್ನು ಎತ್ತಿ ತೋರಿಸುತ್ತದೆ. ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರು ನಿರ್ವಹಿಸುವ ಪಾತ್ರಗಳು ಈಗ ಹೇಗೆ ಬದಲಾಗುತ್ತಿವೆ ಎಂಬುದನ್ನು ಇದು ವಿವರಿಸುತ್ತದೆ.
ಪೇಜ್ ನಲ್ಲಿ ಬಣ್ಣ-ಬಣ್ಣದ ಕೂದಲನ್ನು ಹೊಂದಿರುವ ಮಗು ಮತ್ತು ಫುಟ್ಬಾಲ್ ಆಡುತ್ತಿರುವ ಮಗುವಿನ ಛಾಯಾಚಿತ್ರ ಸಹ ಇದೆ. ಒಂದು ನಿರ್ದಿಷ್ಟ ವಿಷಯದ ಕಡೆಗೆ ಒಲವನ್ನು ತೋರುತ್ತಿರುವ ಮೊದಲ ಹುಡುಗಿ ಮತ್ತು ಹುಡುಗನ ನಂತರದ ಚಿತ್ರ ಎಂದು ನೆಟ್ಟಿಗರು ಹೇಳಿದ್ದಾರೆ.
ಈ ಅಧ್ಯಾಯವನ್ನು ನೆಟ್ಟಿಗರು ಇಷ್ಟಪಟ್ಟಿದ್ದು, ಇದು ಸ್ವಾಗತಾರ್ಹ ಬದಲಾವಣೆ ಎಂದು ಕರೆದಿದ್ದಾರೆ. ಈ ಬದಲಾವಣೆಗಳು ಸೈದ್ಧಾಂತಿಕ ಅಭಿವ್ಯಕ್ತಿಗಳಿಗೆ ಸೀಮಿತವಾಗಿರಬಾರದು. ನಮ್ಮ ಮುಂದಿನ ಜನರೇಶನ್ ಈ ಬದಲಾವಣೆಗಳೊಂದಿಗೆ ಪ್ರಾಯೋಗಿಕವಾಗಿಯೂ ಬದುಕಲಿ ಎಂದು ಹಾರೈಸಿದ್ದಾರೆ.