ಗುವಾಹಟಿ: ಸಹಿ ಎಂಬುದು ಒಬ್ಬ ವ್ಯಕ್ತಿಯ ಗುರುತಿನ ವಿಶಿಷ್ಟ ಮಾರ್ಕರ್ ಆಗಿದೆ. ಅನೇಕರು ಅದನ್ನು ಬಹಳ ಸರಳವಾಗಿ ಆಯ್ಕೆ ಮಾಡಿಕೊಂಡರೆ, ಇತರರು ಉದ್ದೇಶಪೂರ್ವಕವಾಗಿ ಅದನ್ನು ಸಂಕೀರ್ಣಗೊಳಿಸುತ್ತಾರೆ. ಆದ್ದರಿಂದ ಬೇರೆ ಯಾರೂ ಅದನ್ನು ನಕಲಿ ಮಾಡಲು ಸಾಧ್ಯವಾಗುವುದಿಲ್ಲ. ಇದೀಗ ವೈದ್ಯರೊಬ್ಬರ ಸಹಿಯ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಮೆಮೆ ಸೃಷ್ಟಿಯಾಗಿದೆ.
ಸಾಮಾನ್ಯವಾಗಿ ವೈದ್ಯರು ಬರೆಯುವ ಮಾತ್ರೆಗಳ ಹೆಸರನ್ನೇ ನಮಗೆ ಓದಲು ಸಾಧ್ಯವಾಗುವುದಿಲ್ಲ. ಅಷ್ಟು ಕ್ಲಿಷ್ಟಕರವಾಗಿರುತ್ತದೆ. ಇದೀಗ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿ ಮಾಡಿರುವ ಸಹಿಯು ಬಹಳ ವಿಚಿತ್ರವಾಗಿದೆ. ಸಹಿಯು ಹಲವಾರು ಲಂಬ ಮತ್ತು ಓರೆಯಾದ ಗೆರೆಗಳನ್ನು ಹೊಂದಿದೆ ಮತ್ತು ಒಂದೇ ಒಂದು ಅಕ್ಷರವೂ ಗೋಚರಿಸುವುದಿಲ್ಲ.
ವೈರಲ್ ಚಿತ್ರದಲ್ಲಿ ಕಂಡುಬರುವಂತೆ, ಮಾರ್ಚ್ 4, 2022 ರಂದು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ರಿಜಿಸ್ಟ್ರಾರ್ ಅವರ ಸೀಲ್‌ನ ಮೇಲೆ ಸಹಿ ಕಂಡುಬರುತ್ತದೆ. ಟ್ವಿಟರ್ ಬಳಕೆದಾರ ರಮೇಶ್ ಎಂಬುವವರು ಈ ವಿಶಿಷ್ಟವಾದ ಸಹಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದುವರೆಗೆ ತಾನು ನೋಡಿರುವ ಸಹಿಗಳಲ್ಲಿ ಇದು ಅತ್ಯುತ್ತಮವಾಗಿದೆ ಎಂದು ಅವರು ಶೀರ್ಷಿಕೆ ನೀಡಿ ಫೋಟೋ ಪೋಸ್ಟ್ ಮಾಡಿದ್ದಾರೆ. ಸಹಿ ಎಷ್ಟು ಅಸ್ಪಷ್ಟವಾಗಿದೆಯೆಂದರೆ ನೆಟ್ಟಿಗರು ಅದನ್ನು ಮುಳ್ಳುಹಂದಿಗೆ ಹೋಲಿಸಿದ್ದಾರೆ. ಅನೇಕರು ತಮಾಷೆ ಮತ್ತು ಅಸಾಮಾನ್ಯ ಸಹಿಗಳ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಅಧಿಕಾರಿಯು ತನ್ನ ಪೆನ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸುತ್ತಿರುವಂತೆ ತೋರುತ್ತಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಮೊನಚಾದ ರೇಖೆಗಳನ್ನು ಬಿಡಿಸಲು ಅವರು ಎಷ್ಟು ಸಮಯ ತೆಗೆದುಕೊಂಡರೋ ಏನೋ ಎಂದು ಮತ್ತೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
https://twitter.com/ParulAggarwal04/status/1505818494545313795?ref_src=twsrc%5Etfw%7Ctwcamp%5Etweetembed%7Ctwterm%5E1505818494545313795%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-news-jhaadu-or-porcupine-photo-of-guwahati-officials-unusual-signature-triggers-hilarious-memes-5299013%2F