ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನಾಮಧೇಯ ವ್ಯಕ್ತಿಯೊಬ್ಬ ನಕಲಿ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸೃಷ್ಟಿಸಿ ಮಹಿಳೆಗೆ ಬೆದರಿಕೆ ಹಾಕಲು ಪ್ರಯತ್ನಿಸಿದ್ದಾನೆ ಎಂಬ ದೂರು ದಾಖಲಾಗಿತ್ತು. ಅಲ್ಲದೆ ಮಹಿಳೆಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂಬ ಆರೋಪದ ಮೇಲೆ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಬಂಧಿಸಿದೆ.
ತನಿಖೆಯ ಸಮಯದಲ್ಲಿ ಸೈಬರ್ ಕ್ರೈಮ್ ಪೊಲೀಸರು, ಶಂಕಿತ ಇನ್ಸ್ಟಾಗ್ರಾಂ ಐಡಿಗಳ ವಿವರಗಳನ್ನು ಪಟ್ಟಿ ಮಾಡಿದ್ದಾರೆ. ಇದಲ್ಲದೆ, ಸೇವಾ ಪೂರೈಕೆದಾರರಿಂದ ಮೊಬೈಲ್ ಸಂಖ್ಯೆ ಮತ್ತು ಕೆಲವು ಐಪಿ ವಿಳಾಸಗಳನ್ನು ಕೂಡ ಪಡೆದುಕೊಂಡಿದ್ದಾರೆ. ಈ ವೇಳೆ ಮಿಥುನ್ ತಿವಾರಿ ಎಂಬ ಶಂಕಿತ ವ್ಯಕ್ತಿಯನ್ನು ಈ ನಕಲಿ ಇನ್ಸ್ಟಾಗ್ರಾಂ ಖಾತೆಯ ಬಳಕೆದಾರ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಪತ್ತೆಹಚ್ಚಲು ಎಸಿಪಿ ಸಫ್ದರ್‌ಜಂಗ್ ಎನ್‌ಕ್ಲೇವ್ ವಿಕೆಪಿಎಸ್ ಯಾದವ್ ಅವರ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಮಿಥುನ್ ತಿವಾರಿ ಎಂದು ಗುರುತಿಸಲಾದ ಇನ್ಸ್ಟಾಗ್ರಾಂ ಬಳಕೆದಾರನನ್ನು ತಂಡವು ಯಶಸ್ವಿಯಾಗಿ ಬಂಧಿಸಿದೆ. ಆರೋಪಿ ಮಿಥುನ್ ತಿವಾರಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ನಕಲಿ ಇನ್ಸ್ಟಾಗ್ರಾಂ ಖಾತೆ ರಚಿಸಿದ ಮಿಥುನ್ ತಿವಾರಿ ಮಹಿಳೆಯನ್ನು ಫಾಲೋ ಮಾಡಿದ್ದಾನೆ. ನಂತರ ತನ್ನ ಫೇಕ್ ಐಡಿ ಮುಖಾಂತರ ಬೆದರಿಕೆ ಹಾಕಿದ್ದಾನೆ. ಇದೀಗ ಆರೋಪಿಯನ್ನು ಪತ್ತೆಹಚ್ಚಿ ಆತನ ಕೈಗೆ ಕೋಳ ತೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.