ಕೆಲವರಿಗೆ ರಾತ್ರಿ ಮಲಗುವ ವೇಳೆ ಸಾಕ್ಸ್ ಧರಿಸುವುದು ಅಭ್ಯಾಸ. ವಿಪರೀತ ಚಳಿ ಇರುವ ಪ್ರದೇಶಗಳಲ್ಲಿ ಇದು ಅನಿವಾರ್ಯ ಇರಬಹುದು. ಆದರೆ ನಮ್ಮಲ್ಲಿ ಇದನ್ನು ಧರಿಸಿ ಮಲಗುವ ಅವಶ್ಯಕತೆ ಇರಲ್ಲ.
ಇಲ್ಲಿ ಬಿಸಿಲ ಬೇಗೆ ಹೆಚ್ಚು ಇರುವುದರಿಂದ ನೈಲಾನ್ ಸಾಕ್ಸ್ ಗಳು ನಿಮ್ಮ ತ್ವಚೆಯಲ್ಲಿ ಸೋಂಕು ಉಂಟು ಮಾಡಬಲ್ಲವು. ಹಾಗಾಗಿ ಸಾಕ್ಸ್ ಧರಿಸುವುದಿದ್ದರೆ ಕಾಟನ್ ಅನ್ನೇ ಆಯ್ಕೆ ಮಾಡಿ.
ರಾತ್ರಿ ವೇಳೆ ಸಾಕ್ಸ್ ಧರಿಸಿದರೆ ದೇಹ ವಿಪರೀತ ಬೆಚ್ಚಗಾಗಿ ದೇಹದ ಉಷ್ಣತೆ ಹೆಚ್ಚಬಹುದು. ಪಾದಗಳಿಗೂ ಗಾಳಿಯ ಅವಶ್ಯಕತೆ ಇದೆ. ನೀವು ಸಾಕ್ಸ್ ನಿಂದ ಅವುಗಳನ್ನು ಮುಚ್ಚಿಟ್ಟರೆ ರಾತ್ರಿ ನಿಮಗೆ ಸರಿಯಾಗಿ ನಿದ್ದೆ ಬರದಿರಬಹುದು.
ಸಾಕ್ಸ್ ಅನ್ನು ನಿತ್ಯ ತೊಳೆಯುವುದು ಕಡ್ಡಾಯ. ಏಕೆಂದರೆ ಕಾಲಿನ ಬೆವರು, ಸೋಂಕು ಮತ್ತು ವಾಸನೆಯಿಂದ ಕೂಡಿರುತ್ತದೆ. ಹತ್ತಿಯಿಂದ ಮಾಡಲ್ಪಟ್ಟ ಸಾಕ್ಸ್ ಗಳು ನಿಮ್ಮ ಈ ಎಲ್ಲಾ ಸಮಸ್ಯೆಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.