alex Certify ಸಾಕ್ಷ್ಯಚಿತ್ರದಲ್ಲಿ ಹಿಂದೂ ದೇವತೆಗೆ ಅವಹೇಳನ; ನಿರ್ದೇಶಕಿ ನೀಡಿದ್ದಾರೆ ಈ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕ್ಷ್ಯಚಿತ್ರದಲ್ಲಿ ಹಿಂದೂ ದೇವತೆಗೆ ಅವಹೇಳನ; ನಿರ್ದೇಶಕಿ ನೀಡಿದ್ದಾರೆ ಈ ಸ್ಪಷ್ಟನೆ

ಸಾಕ್ಷ್ಯ ಚಿತ್ರವೊಂದರ ಪೋಸ್ಟ್​ ವಿವಾದ ಎಬ್ಬಿಸಿದ್ದು, ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಜನರು ಸಾಕ್ಷ್ಯ ಚಿತ್ರ ನಿರ್ದೇಶಕರ ವಿರುದ್ಧ ಹೋರಾಟ ಆರಂಭವಾಗಿದೆ.

ಬಹು ಜನರ ಆರಾಧ್ಯ ದೈವ ಕಾಳಿ ದೇವಿ ಧೂಮಪಾನ ಮಾಡುವಂತೆ ತೋರಿಸುವ ಸಾಕ್ಷ್ಯಚಿತ್ರದ ಪೋಸ್ಟರ್​ ವಿವಾದಕ್ಕೆ ಕಾರಣವಾಗಿದ್ದು ಇದರ ಬಗ್ಗೆ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಲೀನಾ ಮಣಿಮೇಕಲೈ ಎಂಬುವರು ಸಾಕ್ಷ್ಯಚಿತ್ರ ನಿರ್ದೇಶಿಸಿದ್ದು, ಲೀನಾ ಇತ್ತೀಚೆಗೆ ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್​ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ನೆಟ್ಟಿಗರನ್ನು ಕೆರಳಿಸಿರುವ ಪೋಸ್ಟರ್​ನಲ್ಲಿ ಮಹಿಳೆಯೊಬ್ಬರು ಹಿಂದೂ ದೇವತೆಯ ವೇಷ ತೊಟ್ಟಿದ್ದು, ಅವಳು ಸಿಗರೇಟು ಸೇದುತ್ತಿರುವಂತಿದೆ. ಆಕೆಯ ಹಿಂದೆ ಎಲ್​ಜಿ ಬಿ ಟಿ ಸಮುದಾಯದ ಧ್ವಜ ಕಾಣಬಹುದು.

ದೇವಿಯನ್ನು ಈ ರೀತಿ ಚಿತ್ರಿಸುವ ಮೂಲಕ ಚಿತ್ರ ನಿರ್ಮಾಪಕರು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ದೂರಿದ್ದಾರೆ ಮತ್ತು ಕೂಡಲೇ ಪೋಸ್ಟರ್​ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಅರೆಸ್ಟ್​ ಲೀನಾ ಮಣಿಮೇಕಲೈ ಎಂಬ ಹ್ಯಾಶ್​ಟ್ಯಾಗ್​ ಕೂಡ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ.

ವಿವಾದವು ತೀವ್ರಗೊಳ್ಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಲೀನಾಮಣಿಮೇಕಲೈ “ದ್ವೇಷಕ್ಕಿಂತ ಪ್ರೀತಿ’ ಆಯ್ಕೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಟೊರೊಂಟೊ ಮೆಟ್ರೋಪಾಲಿಟನ್​ ವಿಶ್ವವಿದ್ಯಾಲಯ ಕೆನಡಾ ವೈವಿಧ್ಯಮಯ ಸಂತತಿಯ ಬಗ್ಗೆ ಚಲನಚಿತ್ರಗಳನ್ನು ಮಾಡುವ ಉದ್ದೇಶದಲ್ಲಿ ಶಿಬಿರ ನಡೆಸುತ್ತಿದ್ದು, ಅಲ್ಲಿ ಭಾಗವಹಿಸಲು ಆಹ್ವಾನಿಸಿದೆ. ಆ ಶಿಬಿರದಲ್ಲಿ ನಾನು ಭಾಗವಹಿಸಿ ಕಾಳಿ ಚಿತ್ರ ಪ್ರಸ್ತುತಪಡಿಸುತ್ತಿದ್ದೇನೆ. ನಾನು ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದೇನೆ ಎಂದು ಹೇಳಿದ್ದಾರೆ.

ಒಂದು ಸಂಜೆ ಕಾಳಿ ಟೊರೊಂಟೊದ ಬೀದಿಗಳಲ್ಲಿ ಅಡ್ಡಾಡುವ ಘಟನೆಗಳ ಸುತ್ತ ಚಲನಚಿತ್ರವು ಇದೆ. ನೀವು ಚಿತ್ರವನ್ನು ನೋಡದೇ ಲೀನಾ ಮಣಿಮೇಕಲೈಯನ್ನು ಬಂಧಿಸಿ ಹ್ಯಾಶ್​ ಟ್ಯಾಗ್​ ಮಾಡಬೇಡಿ. ಲವ್​ ಯೂ ಲೀನಾ ಮಣಿಮೇಕಲೈ ಎಂಬ ಹ್ಯಾಶ್​ಟ್ಯಾಗ್​ಗೆ ಪೋಸ್ಟ್​ ಮಾಡಿ. ಈ ಕಾಳಿಯು ವಿವಿಧ ಜನಾಂಗೀಯ ಭಿನ್ನಾಭಿಪ್ರಾಯದ ನಡುವೆ ದ್ವೇಷದ ಬದಲಿಗೆ ಪ್ರೀತಿಯನ್ನು ಆಯ್ಕೆ ಮಾಡುತ್ತಾಳೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...