alex Certify ʼಸಾಕು ಪ್ರಾಣಿʼಯನ್ನು ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದೀರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಾಕು ಪ್ರಾಣಿʼಯನ್ನು ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದೀರಾ…?

ಪ್ರವಾಸ ಹೋಗುವಾಗ ನಿಮ್ಮ ಮುದ್ದಿನ ಸಾಕು ಪ್ರಾಣಿಯನ್ನೂ ಜೊತೆಗೊಯ್ಯಲು ಮರೆಯಬೇಡಿ. ಈ ರೀತಿ ಹೊರಗಡೆ ಹೋಗುವ ಮುನ್ನ ಕೆಲವು ವಿಷಯಗಳತ್ತ ಗಮನ ಹರಿಸಬೇಕು. ಇಲ್ಲಿವೆ ಸಾಕುಪ್ರಾಣಿಗಳಿಗೆ ಟ್ರಾವೆಲ್‌ ಟಿಪ್ಸ್.

* ಕಾರಿನಲ್ಲಿ ಪ್ರಯಾಣಿಸುವುದಾದರೆ ಬೆಕ್ಕು, ನಾಯಿ, ಮೊಲ ಮುಂತಾದ ಪ್ರಾಣಿಗಳನ್ನು ಕ್ಯಾರಿಯರ್‌ ಅಥವಾ ಕ್ರೇಟ್‌ನಲ್ಲಿ ಇಡಿ.

* ಕಾರನ್ನು ಪಾರ್ಕ್‌ ಮಾಡುವಾಗ ತಪ್ಪಿಯೂ ಕೂಡಾ ಪ್ರಾಣಿಯನ್ನು ಅದರೊಳಗೆ ಇರಿಸಬೇಡಿ. ವಾಹನದ ಒಳಗಿನ ಬಿಸಿ ಪ್ರಾಣಿಗಳಿಗೆ ಅನಾರೋಗ್ಯ ಉಂಟು ಮಾಡಬಹುದು.

* ಪ್ರಯಾಣ ಮಾಡುವಾಗ ಕಾರಿನ ಹಿಂದಿನ ಸೀಟಿನಲ್ಲಿ ಅವುಗಳನ್ನು ಕುಳ್ಳಿರಿಸಿ. ಅವುಗಳು ತಮ್ಮ ಕತ್ತನ್ನು ಹೊರ ಹಾಕದಂತೆ ನೋಡಿಕೊಳ್ಳಿ.

* ದೂರ ಪ್ರಯಾಣದ ಮಧ್ಯೆ ಅವುಗಳಿಗೂ ಆಗಾಗ ವಿಶ್ರಾಂತಿ ಕೊಡುತ್ತಿರಿ. ಚೆನ್ನಾಗಿ ಆಹಾರ ಮತ್ತು ನೀರನ್ನು ನೀಡಿ.

* ಬೀಚ್‌ಗೆ ಹೋಗುವುದಾದರೆ ಅವುಗಳು ಸಮುದ್ರದ ನೀರನ್ನು ಕುಡಿಯದಂತೆ ನೋಡಿಕೊಳ್ಳಿ.

* ವಿಮಾನದಲ್ಲಿ ಪ್ರಯಾಣಿಸುವುದಾದರೆ ಕ್ಯಾಬಿನ್‌ನೊಳಗೆ ಸಾಕು ಪ್ರಾಣಿಗಳಿಗೆ ಬರಲು ಅವಕಾಶವಿದೆಯೇ ಎಂಬುದನ್ನು ಮೊದಲೇ ಕೇಳಿ ತಿಳಿದುಕೊಳ್ಳಿ.

* ಸಾಧ್ಯವಾದಷ್ಟು ಪೆಟ್‌ ಫ್ರೆಂಡ್ಲಿ ಹೋಟೆಲ್‌ಗಳಲ್ಲೇ ತಂಗಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...