
ಪ್ರೀತಿಯಿಂದ ನಾಯಿಯನ್ನು ಸಾಕಲೆಂದು ಅವುಗಳನ್ನು ಮನೆಗೆ ತರುವವರಿಗೆ ಅವುಗಳ ಮರಣ ನಂತರ ಉತ್ತಮ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆಗಳಿರುವುದಿಲ್ಲ. ಇಂತಹ ನಿದರ್ಶನಗಳನ್ನು ಗಮನಿಸಿದ ಎನ್ ಜಿ ಓ ವೊಂದು ಮುಂಬೈ ನಿವಾಸಿಗಳ ಅನುಕೂಲಕ್ಕೆಂದೇ ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕಾಗಿ ಹೊಸ ಮೊಬೈಲ್ ವಿದ್ಯುತ್ ಸ್ಮಶಾನವನ್ನು ತಂದಿದೆ.
ಶಿವಸೇನೆಯ ಮಾಜಿ ಕಾರ್ಪೊರೇಟರ್ ಅಭಿಷೇಕ್ ಘೋಸಲ್ಕರ್ ಅವರು ʼಹ್ಯಾಪಿ ಬಡ್ಸ್ ಫೌಂಡೇಶನ್ʼ ನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ವ್ಯಾನ್‌ನೊಳಗೆ ಸ್ಥಾಪಿಸಲಾದ ಸ್ಮಶಾನ, ವಿದ್ಯುತ್ ಮೂಲಕ ಕಾರ್ಯನಿರ್ವಹಿಸುತ್ತದೆ.
ಜನರು ತಮ್ಮ ಸಾಕುಪ್ರಾಣಿಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಶವಸಂಸ್ಕಾರ ಮಾಡಲು ಸಹಾಯ ಮಾಡುತ್ತದೆ. ವ್ಯಾನ್ ಅನ್ನು ಪ್ರಸ್ತುತ ಆರ್ ನಾರ್ತ್ ವಾರ್ಡ್‌ನಲ್ಲಿ ನಿಯೋಜಿಸಲಾಗಿದೆ.
ಸಾಕು ಪ್ರಾಣಿಗಳನ್ನು ಅತ್ಯಲ್ಪ ಶುಲ್ಕದಲ್ಲಿ ಅಂತ್ಯಸಂಸ್ಕಾರ ಮಾಡಿದರೆ, ಬೀದಿ ಪ್ರಾಣಿಗಳನ್ನು ಉಚಿತವಾಗಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಅಭಿಷೇಕ್ ಘೋಸಲ್ಕರ್ ಹೇಳಿದ್ದಾರೆ.
ಮುಂಬೈನಲ್ಲಿ ಸ್ಥಳದ ಕೊರತೆಯಿದೆ ಮತ್ತು ಪ್ರಾಣಿಗಳಿಗೆ ಸ್ಮಶಾನವನ್ನು ಪಡೆಯುವುದು ಅಗತ್ಯವಾಗಿತ್ತು. ಸಾಕು ಪ್ರಾಣಿಗಳನ್ನು ಹೊಂದಿರುವವರು ಅವುಗಳೊಂದಿಗೆ ಭಾವನಾತ್ಮಕ ಬಾಂಧವ್ಯವನ್ನು ಹೊಂದಿರುತ್ತಾರೆ. ಅವುಗಳಿಗೆ ಶವ ಸಂಸ್ಕಾರಕ್ಕೆ ಸೂಕ್ತ ಜಾಗ ಕೊಡುವ ಯೋಚನೆ ಇತ್ತು ಎಂದು ಘೋಸಲ್ಕರ್ ಹೇಳಿದರು.