alex Certify ಸಾಂಸ್ಕೃತಿಕ ಶ್ರೀಮಂತಿಕೆ ಇಂದಿನ ಅಗತ್ಯ: ಬಿ.ಎಸ್. ಲಿಂಗದೇವರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂಸ್ಕೃತಿಕ ಶ್ರೀಮಂತಿಕೆ ಇಂದಿನ ಅಗತ್ಯ: ಬಿ.ಎಸ್. ಲಿಂಗದೇವರು

ಶಿವಮೊಗ್ಗ: ಸಾಂಸ್ಕೃತಿಕ ಶ್ರೀಮಂತಿಕೆಯ ಅಗತ್ಯವಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್. ಲಿಂಗದೇವರು ಹೇಳಿದ್ದಾರೆ.

ಅವರು ಇಂದು ನಗರದ ಲಕ್ಷ್ಮಿ ಚಿತ್ರಮಂದಿರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಜಿಲ್ಲಾಡಳಿತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿ ಮಂಡಲ, ಸಿನಿಮೊಗೆ ಶಿವಮೊಗ್ಗ ಚಿತ್ರಸಮಾಜ ಇವರ ಸಹಯೋಗದಲ್ಲಿ ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆಯಲ್ಲಿ ದಸರಾ ಚಲನಚಿತ್ರೋತ್ಸವ -2022 ಉದ್ಘಾಟಿಸಿ ಮಾತನಾಡಿದರು.

ಸಿನಿಮಾದ ಉದ್ದೇಶ ಏನೆಂದು ಕೇಳಿದರೆ ಕೆಲವರು ಮನರಂಜನೆ ಎನ್ನುತ್ತಾರೆ. ಕೆಲವರು ಇವತ್ತು ಸಿನಿಮಾ ಉದ್ಯಮವಾಗಿ ಬೆಳೆದಿದ್ದು, ಹಣ ಮಾಡುವುದೇ ಉದ್ದೇಶವೆನ್ನುತ್ತಾರೆ. ಮತ್ತೆ ಕೆಲವರು ಸಿನಿಮಾ ಒಂದು ಕಲೆ ಎನ್ನುತ್ತಾರೆ. ಇನ್ನೂ ಕೆಲವರು ನನ್ನ ನೆಲದ ಬಗ್ಗೆ, ನನ್ನ ಕಷ್ಟದ ಬಗ್ಗೆ ಜಗತ್ತಿಗೆ ಹೇಳುವಂತಹ ಮಾಧ್ಯಮ ಎಂದು ಕರೆಯುತ್ತಾರೆ. ಈ ರೀತಿ ವಿಭಿನ್ನ ಪ್ರತಿಕ್ರಿಯೆ ಸಿನಿಮಾದ ಬಗ್ಗೆ ಬರುತ್ತದೆ ಎಂದರು.

ಅಂಗೈಯಲ್ಲೇ ಎಲ್ಲಾ ತಾಂತ್ರಿಕತೆಗಳು ಇರುವುದರಿಂದ ಉತ್ತಮ ಗುಣಮಟ್ಟದ ಚಲನಚಿತ್ರ ಮೊಬೈಲ್ ನಿಂದಲೇ ಮಾಡಲು ಸಾಧ್ಯವಿದೆ. ಸಮಾಜವನ್ನು ಸಾಯಿಸಲು ನೀರಿಗೆ ವಿಷ ಹಾಕಬೇಕಾಗಿಲ್ಲ. ಜನರ ಮನಸ್ಸನ್ನು ಕಲುಷಿತಗೊಳಿಸಿ ಮಲಿನಗೊಳಿಸುವಂತೆ ಚಲನಚಿತ್ರಗಳು ಬರುತ್ತಿವೆ., ಜನರನ್ನು ದಿಕ್ಕುತಪ್ಪಿಸಿ ಕ್ಷೋಭೆ ಉಂಟು ಮಾಡುವಂತಹ ಸಿನಿಮಾಗಳು ಬರುತ್ತಿವೆ. ಸಿನಿಮಾ ಗೆದ್ದ ಮಾತ್ರಕ್ಕೆ ಅದು ಗುಣಮಟ್ಟದ್ದು ಎಂದು ಹೇಳುವಂತಿಲ್ಲ. ಯುವಶಕ್ತಿಯನ್ನು ಸದಭಿರುಚಿಗೆ ಒಯ್ಯುವ ಚಿತ್ರಗಳು ಬರಬೇಕು ಎಂದರು.

ಈ ಸಂದರ್ಭದಲ್ಲಿ ನಟಿಯರಾದ ಮೇಘಶ್ರೀ, ಅಂಕಿತಾ ಅಮರ್, ಶಾಸಕ ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ದಸರಾ ಚಿತ್ರೋತ್ಸವ ಸಮಿತಿ ಅಧ್ಯಕ್ಷೆ ಮಂಜುಳಾ ಶಿವಣ್ಣ, ಬೆಳ್ಳಿ ಮಂಡಲ ಸಂಚಾಲಕ ವೈದ್ಯನಾಥ್, ಚಿತ್ರಮಂದಿರ ಮಾಲೀಕರಾದ ಅಶೋಕ್, ಧೀರರಾಜ್ ಹೊನ್ನವಿಲೆ, ಚನ್ನಬಸಪ್ಪ, ಯೋಗೀಶ್, ಸುರೇಖಾ ಮುರಳೀಧರ್ ಮೊದಲಾದವರಿದ್ದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...