ಸಾಂಬಾರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಿಸಿಯೂಟ ಸಹಾಯಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಪುತ್ತೂರು ನಗರದ ಸಂತ ವಿಕ್ಟರ್ಸ್ ಅನುದಾನಿತ ಶಾಲೆಯಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಕುರಿಯ ಗ್ರಾಮದ ಮಲಾರು ನಿವಾಸಿ 37 ವರ್ಷದ ಅಗ್ನೆಸ್ ಪ್ರಮೀಳಾ ಡಿಸೋಜ ಸಾವನ್ನಪ್ಪಿದವರಾಗಿದ್ದಾರೆ.
ಮೇ 30ರಂದು ಶಾಲೆಯಲ್ಲಿ ಪ್ರಮೀಳಾ ಅವರು ಬಿಸಿಯೂಟ ತಯಾರಿಸುವ ವೇಳೆ ಅಡುಗೆ ಕೋಣೆಯ ಬಾಗಿಲಿನ ಬಳಿ ಸಿದ್ಧಪಡಿಸಿಟ್ಟಿದ್ದ ಸಾಂಬಾರು ಪಾತ್ರೆಗೆ ಕಾಲುಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.