ಅಡುಗೆ ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಎಲ್ಲೋ ಮರೆಯಲ್ಲಿ ಅಡಗಿರುವ ಜಿರಳೆಗಳು ರಾತ್ರಿ ಸಮಯದಲ್ಲಿ ಅಡುಗೆ ಸಾಮಾನು ಡಬ್ಬಗಳ ಮೇಲೆ, ಸ್ವವ್ ಮೇಲೆ, ಪಾತ್ರೆಗಳ ಮೇಲೆ ಓಡಾಡುತ್ತಿರುತ್ತವೆ. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಮನೆಯಲ್ಲೇ ಇರುವ ಕೆಲ ಪದಾರ್ಥಗಳನ್ನು ಬಳಸಿ ಅಡುಗೆ ಮನೆಯನ್ನು ಜಿರಳೆಗಳಿಂದ ಮುಕ್ತವಾಗಿಸಬಹುದು.
* ಸಕ್ಕರೆ, ಮೈದಾ, ಬೋರಿಕ್ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಚಿಕ್ಕ ಉಂಡೆಗಳನ್ನು ಮಾಡಿ ಅಡುಗೆ ಮನೆಯ ಮೂಲೆಗಳಲ್ಲಿ, ಜಿರಳೆ ಹೆಚ್ಚಿರುವ ಜಾಗದಲ್ಲಿ ಇಟ್ಟರೆ ಜಿರಳೆಗಳು ಬರುವುದಿಲ್ಲ.
* ಸೌತೆಕಾಯಿಯನ್ನು ಸಿಪ್ಪೆ ಸಮೇತ ದುಂಡಗೆ ಕತ್ತರಿಸಿ ಅಡುಗೆ ಮನೆಯ ಮೂಲೆಗಳಲ್ಲಿ ಇಡಿ. ಇದನ್ನು ವಾರಕ್ಕೊಮ್ಮೆ ಬದಲಾಯಿಸುತ್ತಿದ್ದರೆ ಜಿರಳೆಗಳ ಕಾಟ ತಪ್ಪುತ್ತದೆ.
* ಕಾಫಿ ಪೌಡರ್ ನ್ನು ಅಡುಗೆ ಮನೆ ಸಂಧಿಗಳಲ್ಲಿ, ಮೂಲೆಗಳಲ್ಲಿ ಸಿಂಪಡಿಸಿ. ಬೆಳಗ್ಗೆ ಅಡುಗೆ ಮನೆ ಸ್ವಚ್ಛಮಾಡಿ. ಹೀಗೆ ಮೂರು ನಾಲ್ಕು ದಿನ ಮಾಡಿದರೆ ಜಿರಳೆಗಳು ಬರುವುದಿಲ್ಲ.
* ಬಿರಿಯಾನಿ ಎಲೆಗಳನ್ನು ಚೆನ್ನಾಗಿ ಪುಡಿ ಮಾಡಿ ಜಿರಳೆ ಹೆಚ್ಚಿರುವ ಜಾಗದಲ್ಲಿ ಹಾಗೂ ಅಡುಗೆ ಮನೆಯ ಎಲ್ಲಾ ಕಡೆ ಹಾಕುವುದರಿಂದ ಇದರ ವಾಸನೆಗೆ ಜಿರಳೆಗಳು ಬರುವುದಿಲ್ಲ.
* ಬೆಳ್ಳುಳ್ಳಿ ಅಥವಾ ಈರುಳ್ಳಿ ರಸವನ್ನು ಒಂದು ಲೋಟ ನೀರಿಗೆ ಹಾಕಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿಗೆ ಹಾಕಿ ಅಡುಗೆ ಮನೆಯ ಎಲ್ಲಾ ಕಡೆ ಸ್ಪ್ರೇ ಮಾಡಿದರೆ ಜಿರಳೆಗಳು ಮನೆಯಿಂದ ಆಚೆ ಹೋಗುತ್ತವೆ.
* ಬೆಳ್ಳುಳ್ಳಿ, ಈರುಳ್ಳಿ, ಮೆಣಸನ್ನು ಚೆನ್ನಾಗಿ ಜಜ್ಜಿ ಚಿಕ್ಕ ಚಿಕ್ಕ ಉಂಡೆ ಮಾಡಿ ಅಡುಗೆ ಮನೆಯ ಮೂಲೆಗಳಲ್ಲಿ ಇಟ್ಟರೆ ಜಿರಳೆಗಳು ಹೊರ ಹೋಗುತ್ತವೆ. ಇದೇ ರೀತಿ ಎರಡು ಮೂರು ದಿನ ಮಾಡಿ.
* 2 ಚಮಚ ಪುದೀನ ಎಣ್ಣೆಯನ್ನು ಅಥವಾ ನಿಂಬೆ ಹಣ್ಣಿನ ರಸವನ್ನು ಒಂದು ಲೋಟ ನೀರಿಗೆ ಹಾಕಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿಗೆ ಹಾಕಿ ಅಡುಗೆ ಮನೆಯ ಎಲ್ಲಾ ಕಡೆ ಸ್ಪ್ರೇ ಮಾಡಿದರೆ ಜಿರಳೆಗಳು ಹೊರ ಹೋಗುತ್ತವೆ.