
ಪೇಶಾವರ್ ಝಲ್ಮಿ ವಿರುದ್ಧದ ಪ್ರಮುಖ ಪಂದ್ಯವೊಂದರಲ್ಲಿ ಕ್ಯಾಚ್ ಕೈಬಿಟ್ಟಿದ್ದಕ್ಕಾಗಿ ರೌಫ್ ಕಮ್ರಾನ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಕಮ್ರಾನ್ ತನ್ನ ಆಕ್ರಮಣಕಾರಿ ಬೌಲಿಂಗ್ ನಿಂದ ದಾಂಡಿಗ ವಹಾಬ್ ರಿಯಾಜ್ ರನ್ನು ಕ್ಲೀನ್ ಬೋಲ್ಡ್ ಮಾಡಿದಾಗ, ಆತನನ್ನು ಹ್ಯಾರಿಸ್ ರೌಫ್ ತಬ್ಬಿಕೊಂಡಿದ್ದಾರೆ.
ಕಮ್ರಾನ್ ಗುಲಾಮ್, ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ಹಜರತುಲ್ಲಾ ಝಜೈ ಅವರ ಕ್ಯಾಚ್ ಅನ್ನು ಕೈಬಿಟ್ಟಿದ್ದರು. ಈ ವೇಳೆ ಕೋಪಗೊಂಡ ವೇಗಿ ಹ್ಯಾರಿಸ್ ಕಮ್ರಾನ್ ಗೆ ಕಪಾಳಮೋಕ್ಷ ಮಾಡಿದ್ದರು. ಪಂದ್ಯದ ವೇಳೆ ನಡೆದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಪಿಎಸ್‌ಎಲ್‌ನ ಟ್ವಿಟ್ಟರ್ ಖಾತೆ ಕೂಡ ವಿಡಿಯೋವನ್ನು ಹಂಚಿಕೊಂಡಿದೆ.
ಮೈದಾನದಲ್ಲಿ ಹ್ಯಾರಿಸ್ ನಡವಳಿಕೆಗೆ ಕೆಲವು ಕ್ರಿಕೆಟ್ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಸಜ್ಜನರ ಆಟವಾಗಿದೆ. ಇದು ಮೈದಾನದಲ್ಲಿ ಅಭಿಮಾನಿಗಳು ನಿರೀಕ್ಷಿಸುವ ರೀತಿಯ ನಡವಳಿಕೆಯಲ್ಲ ಎಂದು ಕಿಡಿಕಾರಿದ್ದಾರೆ.
— PakistanSuperLeague (@thePSLt20) February 21, 2022