
ಹೌದು, ಉದ್ಯಮಿ ಮಹೀಂದ್ರಾ ಈ ಬಾರಿ ತಮ್ಮ ಟ್ವಿಟ್ಟರ್ ನಲ್ಲಿ ಹುಲಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಸಹೋದರಿ ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಬರೆದಿದ್ದಾರೆ. ಪೋಸ್ಟ್‌ನಲ್ಲಿ ಅವರು, ಈ ಚಿತ್ರಗಳು ತಮಗೆ ಅಸೂಯೆ ಪಡಿಸಿದವು ಎಂದು ಬರೆದಿದ್ದಾರೆ. ಆದರೆ, ಅದರ ಹಿಂದಿನ ಕಾರಣ ಕೇಳಿದ್ರೆ ಮಾತ್ರ ನಿಮ್ಮನ್ನು ನಗುವಂತೆ ಮಾಡುತ್ತದೆ.
ತಾನು ಬಾಲ್ಯದ ಬಹುಪಾಲು ರಜೆಯನ್ನು ನಾಗರಹೊಳೆ ಅಭಯಾರಣ್ಯದ ಬಳಿ ಕಳೆದಿರುವುದಾಗಿ ಮಹೀಂದ್ರಾ ತಿಳಿಸಿದ್ದಾರೆ. ಹಲವಾರು ಬಾರಿ ಅಲ್ಲಿಗೆ ಹೋಗಿದ್ದರೂ ಇನ್ನೂ ಹುಲಿಯನ್ನು ಅದರ ಆವಾಸಸ್ಥಾನದಲ್ಲಿ ನೋಡಿಲ್ಲ ಎಂದಿದ್ದಾರೆ. ಸಹೋದರಿ ತನಗೆ ಬಾಂಧವಗಢ ರಾಷ್ಟ್ರೀಯ ಉದ್ಯಾನವನದಿಂದ ಈ ಅದ್ಭುತ ಚಿತ್ರಗಳನ್ನು ಕಳುಹಿಸಿದ್ದಾಳೆ (ಫೋಟೋಗಳು: ಆಶಿಶ್ ಟಿರ್ಕಿ, ನ್ಯಾಚುರಲಿಸ್ಟ್). ಇದನ್ನು ನೋಡಿ ತಾನು ತುಂಬಾ ಅಸೂಯೆಪಟ್ಟಿದ್ದಾಗಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಈ ಫೋಟೋ ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ನೆಟ್ಟಿಗರು ತಾವು ಸಫಾರಿಯಲ್ಲಿ ವೀಕ್ಷಿಸಿದ ಹುಲಿಗಳ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.