
ಬೇಕಾಗುವ ಪದಾರ್ಥ :
100 ಗ್ರಾಂ ಕಡ್ಲೆ ಹಿಟ್ಟು, 100 ಗ್ರಾಂ ಗೋಧಿ ಹಿಟ್ಟು, 200 ಗ್ರಾಂ ಸಕ್ಕರೆ, ಅರ್ಧ ತೆಂಗಿನಕಾಯಿ, ಕೇಸರಿ ಬಣ್ಣ 1 ಚಮಚ, 1 ಚಮಚ ಯಾಲಕ್ಕಿ ಪುಡಿ, 25 ಗ್ರಾಂ ತುಪ್ಪ.
ಮಾಡುವ ವಿಧಾನ :
ಹಿಟ್ಟನ್ನು ತುಪ್ಪದಲ್ಲಿ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಹುರಿದ ಹಿಟ್ಟಿಗೆ ತೆಂಗಿನಕಾಯಿ ತುರಿ ಸೇರಿಸಿ. ಸಕ್ಕರೆಗೆ 2 ಲೋಟ ನೀರು ಹಾಕಿ ಒಲೆಯ ಮೇಲಿಡಿ. ಹಿಟ್ಟು ಬೆಂದು ಗಟ್ಟಿಯಾದ ಮೇಲೆ ತುಪ್ಪ ಹಾಕಿ ಕೆದಕಿ. ತಳ ಹಿಡಿಯದಂತೆ ಕೆದುಕುತ್ತಿರಬೇಕು.
ನಂತರ ಏಲಕ್ಕಿ ಪುಡಿ, ಕೇಸರಿ ಬಣ್ಣ ಸೇರಿಸಿ 2 ನಿಮಿಷ ಬಿಟ್ಟು ಕೆಳಗಿಳಿಸಿ. ನಂತರ ಸವಿ ಸವಿಯಾದ ಸಿಹಿ ಸವಿಯಿರಿ.