ಬೇಕಾಗುವ ಸಾಮಾಗ್ರಿಗಳು: ಬೂದು ಕುಂಬಳಕಾಯಿ ತುರಿ – 5 ಕಪ್, ಸಕ್ಕರೆ – 2.5 ಕಪ್, ತುಪ್ಪ – 1 ಕಪ್, ದ್ರಾಕ್ಷಿ, ಗೋಡಂಬಿ. ಏಲಕ್ಕಿ.
ಮಾಡುವ ವಿಧಾನ: ಬೂದು ಕುಂಬಳಕಾಯಿಯನ್ನು ಚೆನ್ನಾಗಿ ತೊಳೆಯಿರಿ. ಬಳಿಕ ಅದನ್ನು ಕೊಯ್ದು ತಿರುಳನ್ನು ತೆಗೆಯಿರಿ. ಹೋಳನ್ನು ತುಂಡು ಮಾಡಿ ಸಿಪ್ಪೆ ತೆಗೆಯಿರಿ. ನಂತರ ಹೋಳುಗಳನ್ನು ಸಣ್ಣಗೆ ತುರಿಯಿರಿ. ಮೊದಲಿಗೆ ಪಾತ್ರೆಯಲ್ಲಿ 3 ರಿಂದ 4 ಚಮಚ ತುಪ್ಪ ಹಾಕಿ ಗೇರುಬೀಜ ಹಾಗೂ ದ್ರಾಕ್ಷಿಯನ್ನು ಹುರಿದಿಟ್ಟುಕೊಳ್ಳಿ. ತುರಿದಿಟ್ಟ 5 ಕಪ್ ನಷ್ಟು ಕುಂಬಳಕಾಯಿಯನ್ನು ಪಾತ್ರೆಗೆ ಹಾಕಿ ಬೇಯಿಸಿಕೊಳ್ಳಬೇಕು.
ನೀರೆಲ್ಲಾ ಆವಿಯಾದ ಬಳಿಕ 2.5 ಕಪ್ ನಷ್ಟು ಸಕ್ಕರೆ ಹಾಕಿಕೊಳ್ಳಿ. ಸಕ್ಕರೆ ಎಲ್ಲಾ ಕರಗಿ ನೀರಾಗುತ್ತದೆ. ಸೌಟ್ ನಲ್ಲಿ ತಿರುಗುತ್ತಾ ಇರಿ. ಬಳಿಕ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕುತ್ತಾ ತಿರುವುತ್ತಿರಿ. ಗಟ್ಟಿಯಾಗುತ್ತಾ ಬರುವಾಗ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಜೊತೆಗೆ ಕುಟ್ಟಿ ಪುಡಿ ಮಾಡಿರುವ ಏಲಕ್ಕಿ ಹಾಕಿ ತಿರುವಿರಿ. ಬಳಿಕ ಸರ್ವಿಂಗ್ ಬೌಲ್ ಗೆ ಹಾಕಿದರೆ ಸವಿ ಸವಿ ಕಾಶಿ ಹಲ್ವಾ ಸಿದ್ಧ.