ಈಗಂತೂ ಕೆಲವರಿಗೆ ರಾತ್ರಿ ಊಟಕ್ಕೆ ಚಪಾತಿ ಬೇಕೇ ಬೇಕು ಎನ್ನುವಂತಾಗಿದೆ.
ದಿನಾ ಅದೇ ಚಪಾತಿ ತಿಂದು ಬೋರಾಗಿದ್ದರೆ, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಅನ್ನು ಸೇರಿಸಿ ಚಪಾತಿ ಮಾಡಿಕೊಂಡು ಸವಿಯಿರಿ. ಇಲ್ಲಿದೆ ಕ್ಯಾರೆಟ್ ಕ್ಯಾಪ್ಸಿಕಮ್ ಚಪಾತಿ ಮಾಡುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಗೋಧಿ ಹಿಟ್ಟು – 2 ಕಪ್
ಕ್ಯಾರೆಟ್ – 1
ಕ್ಯಾಪ್ಸಿಕಮ್ – 1
ಉಪ್ಪು ರುಚಿಗೆ ತಕ್ಕಷ್ಟು
ಮಸಾಲಾ ಪುಡಿ – 1 ಚಮಚ
ಅಚ್ಚ ಖಾರದ ಪುಡಿ – 2 ಚಮಚ
ಎಣ್ಣೆ – 1/2 ಕಪ್
ಮಾಡುವ ವಿಧಾನ
ಮೊದಲು ಕ್ಯಾಪ್ಸಿಕಮ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಮತ್ತು ಕ್ಯಾರೆಟ್ ಅನ್ನು ತುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದು ಕಾದ ಮೇಲೆ ಹೆಚ್ಚಿಟ್ಟ ಕ್ಯಾಪ್ಸಿಕಮ್ ಮತ್ತು ಕ್ಯಾರೆಟ್ ಅನ್ನು ಹಾಕಿ 5 ನಿಮಿಷ ಫ್ರೈ ಮಾಡಬೇಕು. ನಂತರ ಸ್ವಲ್ಪ ನೀರು, ಉಪ್ಪು, ಅಂಗಡಿಯಲ್ಲಿ ದೊರೆಯುವ ಯಾವುದಾದರೂ ಮಸಾಲಾ ಪುಡಿ, ಅಚ್ಚ ಖಾರದ ಪುಡಿ ಹಾಕಿ ಬೇಯಿಸಬೇಕು. ಅರ್ಧ ಬೆಂದ ನಂತರ ಸ್ವಲ್ಪ ಬಿಸಿ ಕಮ್ಮಿ ಆದ ಮೇಲೆ ಗೋಧಿ ಹಿಟ್ಟನ್ನು ಸೇರಿಸಿ ಚಪಾತಿಯ ಹಿಟ್ಟಿನಂತೆ ಕಲಸಬೇಕು.
ನಂತರ ಉಂಡೆ ಮಾಡಿಕೊಂಡು ಚಪಾತಿಯನ್ನು ಲಟ್ಟಿಸಿ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿದರೆ ಬಿಸಿ ಬಿಸಿಯಾದ ರುಚಿ ರುಚಿಯಾದ ಕ್ಯಾರೆಟ್ ಕ್ಯಾಪ್ಸಿಕಮ್ ಚಪಾತಿ ಸವಿಯಲು ಸಿದ್ಧ. ಇದನ್ನು ಹಾಗೆಯೇ ತಿನ್ನಲು ರುಚಿಯಾಗಿರುತ್ತದೆ ಅಥವಾ ಚಟ್ನಿ ಜೊತೆಯಲ್ಲಿ ಸವಿಯಲು ಮಜವಾಗಿರುತ್ತದೆ.