ಡ್ರೈ ಫ್ರೂಟ್ಸ್ ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು. ಹಾಗಾದರೆ ಈ ಡ್ರೈ ಫ್ರೂಟ್ಸ್ ಬರ್ಫಿ ಹೇಗೆ ಮಾಡುವುದು ಅಂತ ನೋಡಿ.
ಬೇಕಾಗುವ ಸಾಮಗ್ರಿಗಳು
ಖರ್ಜೂರ ಒಂದು ಬೌಲ್. ಗೋಡಂಬಿ, ಬಾದಾಮಿ, ಪಿಸ್ತಾ ಸಣ್ಣಗೆ ಕಟ್ ಮಾಡಿರೋದು ಅರ್ಧ ಬೌಲ್. ಗಸಗಸೆ 50 ಗ್ರಾಂ, ತುಪ್ಪ 4 ಚಮಚ.
ಮಾಡುವ ವಿಧಾನ
ಖರ್ಜೂರವನ್ನು ಮಿಕ್ಸಿ ಜಾರ್ ನಲ್ಲಿ ಅರೆದಿಡಬೇಕು. ಸ್ವಲ್ಪ ತುಪ್ಪ ಬಿಸಿ ಮಾಡಿ ಗಸಗಸೆಯನ್ನು ಹುರಿದು ಕೊಳ್ಳಬೇಕು. ಆಮೇಲೆ ಡ್ರೈ ಫ್ರೂಟ್ಸ್ ಹುರಿಯಬೇಕು.
ಸ್ವಲ್ಪ ತುಪ್ಪ ಬಿಸಿ ಮಾಡಿ ಅದಕ್ಕೆ ಖರ್ಜೂರ ಮಿಶ್ರಣ ಹಾಕಿ ಮೆತ್ತಗೆ ಮಾಡಿ ಕೊಳ್ಳಬೇಕು. ಆಮೇಲೆ ಡ್ರೈ ಫ್ರೂಟ್ಸ್ ಮತ್ತು ಗಸಗಸೆಯ ಅರ್ಧಭಾಗವನ್ನು ಹಾಕಿ ಕಲಸಿ ಕೊಳ್ಳಬೇಕು. ಈ ಮಿಶ್ರಣ ಸ್ವಲ್ಪ ಆರಿದ ಮೇಲೆ ಉಳಿದ ಗಸಗಸೆ, ಡ್ರೈ ಫ್ರೂಟ್ಸ್ ಉದುರಿಸಿ ಚೆನ್ನಾಗಿ ರೋಲ್ ಮಾಡಿ ಪೇಪರ್ ಫಾರ್ ನಲ್ಲಿ ಗಟ್ಟಿಯಾಗಿ ಸುತ್ತಬೇಕು. ಫ್ರಿಡ್ಜ್ ನಲ್ಲಿ 40 ನಿಮಿಷ ಇಟ್ಟು ನಂತರ ಬರ್ಫಿ ಅಂತೆ ಕತ್ತರಿಸಿದರೆ ಖರ್ಜೂರ ಡ್ರೈ ಫ್ರೂಟ್ಸ್ ಬರ್ಫಿ ರೆಡಿ ಟು ಈಟ್.