alex Certify ಸವಿಯಾದ ʼಕ್ಯಾರೆಟ್ ಖೀರ್ʼ ಮಾಡಿ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸವಿಯಾದ ʼಕ್ಯಾರೆಟ್ ಖೀರ್ʼ ಮಾಡಿ ಸವಿಯಿರಿ

ಸಾಮಾನ್ಯವಾಗಿ ಜನರು ಸಿಹಿ ತಿಂಡಿಯನ್ನು ಇಷ್ಟಪಡ್ತಾರೆ. ಸಿಹಿ ಎಂದಾಗ ಮೊದಲು ನೆನಪಾಗೋದು ಕ್ಯಾರೆಟ್ ಹಲ್ವಾ. ಆದ್ರೆ ಈ ಬಾರಿ ಹಲ್ವಾ ಬದಲು ಕ್ಯಾರೆಟ್ ಖೀರ್ ಮಾಡಿ.

ಕ್ಯಾರೆಟ್ ಖೀರ್ ಮಾಡಲು ಬೇಕಾಗುವ ಪದಾರ್ಥ :

ಕ್ಯಾರೆಟ್  : ಅರ್ಧ ಕೆ.ಜಿ

ಸಕ್ಕರೆ : ರುಚಿಗೆ ತಕ್ಕಷ್ಟು

ಹಾಲು : ಅರ್ಧ ಲೀಟರ್

ತುಪ್ಪ: ಎರಡು ಚಮಚ

ಗೋಡಂಬಿ : ಒಂದು ಕಪ್

ಬಾದಾಮಿ : 10-15

ಏಲಕ್ಕಿ : 2

ಕ್ಯಾರೆಟ್ ಖೀರ್ ಮಾಡುವ ವಿಧಾನ :

ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಬಿಸಿ ಮಾಡಿದ ತುಪ್ಪಕ್ಕೆ ಸಕ್ಕರೆ ಹಾಗೂ ತುರಿದ ಕ್ಯಾರೆಟ್ ಹಾಕಿ. ಇದಾದ್ಮೇಲೆ 2ರಿಂದ 5 ನಿಮಿಷ ಬೇಯಿಸಿ. ನಂತ್ರ ಹಾಲು ಸೇರಿಸಿ ಕಡಿಮೆ ಉರಿಯಲ್ಲಿ ಸುಮಾರು 20 ನಿಮಿಷ ಬೇಯಿಸಿ.

ಎಲ್ಲವೂ ಬೆಂದ ಮೇಲೆ ಏಲಕ್ಕಿ ಹುಡಿ ಹಾಕಿ. ತುಪ್ಪದಲ್ಲಿ ಒಣ ದ್ರಾಕ್ಷಿ, ಗೋಡಂಬಿ ಹಾಕಿ ಹುರಿದು ಮಿಶ್ರಣಕ್ಕೆ ಹಾಕಿದ್ರೆ ಕ್ಯಾರೆಟ್ ಖೀರ್ ಸಿದ್ಧ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...