ಸೀಬೆ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಹಲವು ರೋಗಗಳಿಗೆ ರಾಮಬಾಣ. ಇದರಲ್ಲಿ ಇರುವ ಪೌಷ್ಟಿಕಾಂಶ, ವಿಟಮಿನ್, ಫೈಬರ್, ವಿಟಮಿನ್ ಎ ಬಿ ಸಿ, ಪೊಟ್ಯಾಷಿಯಂ ಇರುವುದರಿಂದ ಇದು ಆರೋಗ್ಯವನ್ನು ಕಾಪಾಡುತ್ತದೆ.
ಸಣ್ಣಗಾಗಬಯಸುವವರು ಸೀಬೆಹಣ್ಣನ್ನು ತಿನ್ನಬಹುದು. ಇದು ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ. ಕಿತ್ತಳೆ ಹಣ್ಣಿಗಿಂತಲೂ ಹೆಚ್ಚು ವಿಟಮಿನ್ ಅಂಶಗಳನ್ನು ಹೊಂದಿರುವ ಈ ಹಣ್ಣು ಅಲ್ಜೆಮರ್, ಅರ್ಥಾರೈಟಿಸ್ ಹಾಗೂ ಕಣ್ಣಿನ ಪೊರೆಯುಂಟಾಗುವಂಥ ಕಾಯಿಲೆಗಳನ್ನು ದೂರ ಮಾಡಬಹುದು. ಜೀರ್ಣಕ್ರಿಯೆ ಹೆಚ್ಚಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.
ಹಲ್ಲಿನ ತೊಂದರೆ ಇರುವವರು ಸೀಬೆ ಹಣ್ಣಿನ ರಸವನ್ನು ಸೇವಿಸಬಹುದು. ಇದರಲ್ಲಿರುವ ಅಧಿಕ ನಾರಿನಂಶವು ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಜಾಸ್ತಿ ಆಗದಂತೆ ತಡೆಗಟ್ಟುತ್ತದೆ.