ಕೇಸರಿ ಬಾತ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ರುಚಿ ರುಚಿಯಾದ ಈ ಖಾದ್ಯ ಸವಿಯಲು ಮಕ್ಕಳೂ ಇಷ್ಟ ಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಮಾಡುವ ಅಕ್ಕಿ-ಓಟ್ಸ್ ಕೇಸರಿ ಬಾತ್ ಟೇಸ್ಟ್ ಹೇಗಿರುತ್ತೆ ನೋಡಿ.
ಬೇಕಾಗುವ ಸಾಮಗ್ರಿಗಳು :
ಅಕ್ಕಿ – 1 ಬಟ್ಟಲು
ಓಟ್ಸ್ – 1/4 ಬಟ್ಟಲು
ಸಕ್ಕರೆ – 1 1/2 ಬಟ್ಟಲು
ತುಪ್ಪ – 1/2 ಬಟ್ಟಲು
ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ
ಕೇಸರಿ ಬಣ್ಣ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಒಣ ಕೊಬ್ಬರಿ ಚೂರು ಸ್ವಲ್ಪ
ಲವಂಗ – 4-5
ಮಾಡುವ ವಿಧಾನ :
ಮೊದಲು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಅಕ್ಕಿಯನ್ನು ಹುರಿದುಕೊಳ್ಳಬೇಕು. ಅದಕ್ಕೆ 2 ಬಟ್ಟಲು ನೀರು ಸೇರಿಸಿ ಜೊತೆಗೆ ಓಟ್ಸ್ ಹಾಕಿ ಚೆನ್ನಾಗಿ ಬೇಯಿಸಿ.
ನಂತರ ಸಕ್ಕರೆ, ಕೇಸರಿ ಬಣ್ಣ, ಏಲಕ್ಕಿ ಪುಡಿ, ಗೋಡಂಬಿ ದ್ರಾಕ್ಷಿ, ಕೊಬ್ಬರಿ ಚೂರು ಸೇರಿಸಿ ಹದವಾಗಿ ಬೇಯಿಸಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಲವಂಗ ಹಾಕಿ ಬಿಸಿ ಬಿಸಿ ಕೇಸರಿ ಬಾತ್ ಸವಿಯಲು ನೀಡಿ.