ಅಳಲೆಕಾಯಿಯಲ್ಲಿ ವಿವಿಧ ಬಗೆಗಳಿವೆ ಜಯಾ ಅಳಲೆ, ರೋಹಿಣಿ ಅಳಲೆ, ಪುಟಾಣಿ ಅಳಲೆ, ಅಮೃತ ಅಳಲೆ, ಅಭಯ ಅಳಲೆ, ಜೀವಂತಿ ಅಳಲೆ, ಚೇತಕಿ ಅಳಲೆ ಹೀಗೆ ಹತ್ತು ಹಲವು ಅಳಲೆಕಾಯಿ ಇವೆ.
ಬೇರೆ ಬೇರೆ ಕಾಯಿಲೆಗಳಿಗೆ ವಿವಿಧ ಬಗೆಯ ಅಳಲೆಕಾಯಿಯನ್ನು ಔಷಧವಾಗಿ ಉಪಯೋಗಿಸುತ್ತಾರೆ. ಆದರೆ ಜೀವಂತಿ ಅಳಲೆ ಎಂಬ ಹಳದಿ ಬಣ್ಣದ ಅಳಲೆಯನ್ನು ಎಲ್ಲಾ ಕಾಯಿಲೆಗೂ ಉಪಯೋಗಿಸಬಹುದು.
ಅಳಲೆಕಾಯಿ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ. ಮಾನವನ ದೇಹದ ಸ್ವಾಸ್ಥ್ಯಕ್ಕೆ ಅವಶ್ಯವಿರುವ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಪ್ರೋಟಿನ್ ಗಳು ಇದರಲ್ಲಿ ಹೇರಳವಾಗಿವೆ. ವಿಟಮಿನ್ ಸಿ, ಐರನ್, ಕಾಪರ್ ಸಹಿತ ಇನ್ನೂ ಅನೇಕ ಖನಿಜಾಂಶಗಳಿವೆ.
ಇದನ್ನು ನಿಯಮಿತವಾಗಿ ಸೇವಿಸಿದರೆ ತೂಕವನ್ನು ಕಡಿಮೆಗೊಳಿಸಲು, ವಾಯುಭಾದೆ ನಿವಾರಿಸಲು, ರಕ್ತ ಶುದ್ಧೀಕರಿಸಲು ಸಹಾಯ ಮಾಡುತ್ತದೆ.
ಕೂದಲು ಉದುರುವಿಕೆ, ಹೇನು ಮತ್ತು ತಲೆ ಹೊಟ್ಟನ್ನು ನಿವಾರಿಸಲು 1 ಕಪ್ ಕೊಬ್ಬರಿ ಎಣ್ಣೆಗೆ 3 ಅಳಲೆಕಾಯಿ ಬೀಜವನ್ನು ಹಾಕಿ, ಕಾಯಿಸಿ ಎಣ್ಣೆ ತಣ್ಣಗಾದ ನಂತರ ಉಪಯೋಗಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
ಅಳಲೆಕಾಯಿಯನ್ನು ನುಣ್ಣಗೆ ಪುಡಿ ಮಾಡಿ ಜೇನು ತುಪ್ಪದೊಂದಿಗೆ ಬೆರೆಸಿ 6-7 ದಿನಗಳ ಕಾಲ ಕೊಟ್ಟರೆ ಕೆಮ್ಮು ನಿವಾರಣೆಯಾಗುವುದು.
ಡಯಾಬಿಟಿಸ್ ಕಾಯಿಲೆಯವರು ಹಾಗೂ ಗರ್ಭಿಣಿಯರು ವೈದ್ಯರ ಸಲಹೆ ಮೇರೆಗೆ ಉಪಯೋಗಿಸುವುದು ಒಳಿತು.