![](https://kannadadunia.com/wp-content/uploads/2021/08/police_officer_arrested_113.jpg)
ಮಡಿಕೇರಿ: ಪ್ರೊಬೇಷನರಿ ಪಿಎಸ್ಐ ಓರ್ವರು ಸರ್ಕಾರದ ವಿರುದ್ಧ ಬಾಯಿಗೆ ಬಂದಂತೆ ವಾಗ್ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ವೃತ್ತ ನಿರೀಕ್ಷಕರ ಕಚೇರಿ ಪ್ರೊಬೇಷನರಿ ಪಿಎಸ್ಐ ಕಾಶಿನಾಥ ಬಗಲಿ ಸರ್ಕಾರದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು, ಸರ್ಕಾರ ನಡೆಯುತ್ತಿರುವುದೇ ನಮ್ಮಿಂದ, ಸರ್ಕಾರ ಯಾವ ಬಡತನದಲ್ಲಿಯೂ ಇಲ್ಲ, ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರು ಲೋಫರ್ ಗಳು ಎಂದು ಬೈದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರೊಬೇಷನರಿ ಅವಧಿಯಲ್ಲೇ ಪಿಎಸ್ಐ ಹೀಗೆ ವಾಗ್ದಾಳಿ ನಡೆಸಿದ್ದು, ಚೌಡ್ಲು ಗ್ರಾಮ ಪಂಚಾಯತಿ ಸದಸ್ಯ ಗಣಪತಿ ಎಂಬುವವರು ಕೊಡಗು ಎಸ್ಪಿ ಆಯ್ಯಪ್ಪ ಅವರಿಗೆ ದೂರು ನೀಡಿದ್ದಾರೆ.