alex Certify ಸರ್ಕಾರಿ ಶಾಲೆ ನೀರಿನ ಟ್ಯಾಂಕ್ ಗೆ ವಿಷಕಾರಿ ರಸಾಯನಿಕ ಬೆರೆಸಿದ ಪಾಪಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಶಾಲೆ ನೀರಿನ ಟ್ಯಾಂಕ್ ಗೆ ವಿಷಕಾರಿ ರಸಾಯನಿಕ ಬೆರೆಸಿದ ಪಾಪಿಗಳು

ಮಡಿಕೇರಿ : ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್ ಗೆ ಪಾಪಿಗಳು ವಿಷಕಾರಿ ರಸಾಯನಿಕ ಬೆರೆಸಿರುವ ಘಟನೆ ನಡೆದಿದೆ. ಈ ಟ್ಯಾಂಕ್ ನಲ್ಲಿ ದುಷ್ಕರ್ಮಿಗಳು ವಿಷಕಾರಿ ರಾಸಾಯನಿಕ ಬೆರೆಸಿದ್ದಾರೆ. ಆದರೆ, ಅದೃಷ್ಟವಶಾತ್ ಮಕ್ಕಳಿಗೆ ಮಾತ್ರ ಯಾವ ತೊಂದರೆಯೂ ಆಗಿಲ್ಲ.‌

ಜಿಲ್ಲೆಯ ಸುಂಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶೌಚಾಲಯದಲ್ಲಿ ಕೆಟ್ಟ ವಾಸನೆ ಬರುತ್ತಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮುಖ್ಯ ಶಿಕ್ಷಕಿ ಗೀತಾ ಪರಿಶೀಲನೆ ನಡೆಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಕೂಡಲೇ ಎಚ್ಚೆತ್ತುಕೊಂಡ ಶಾಲಾ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ನೀರನ್ನು ಪರಿಶೀಲಿಸಿ ವಿದ್ಯಾರ್ಥಿಗಳು ಅವುಗಳನ್ನು ಬಳಸದಂತೆ ನೋಡಿಕೊಂಡಿದ್ದಾರೆ. ಶಾಲೆಯಲ್ಲಿ 115 ವಿದ್ಯಾರ್ಥಿಗಳಿದ್ದು, ಯಾರೊಬ್ಬರು ಈ ನೀರನ್ನು ಬಳಕೆ ಮಾಡಿಲ್ಲ. ಅವರ ಸಮಯೋಚಿತದಿಂದಾಗಿ ದೊಡ್ಡ ಅನಾಹುತ ತಪ್ಪಿದೆ. ಇದರಿಂದಾಗಿ ಎಲ್ಲ ಮಕ್ಕಳು ಸುರಕ್ಷಿತರಾಗಿದ್ದಾರೆ.

ಸದ್ಯ ಆಡಳಿತ ಮಂಡಳಿ ತಾಲೂಕು ಶಿಕ್ಷಣಾಧಿಕಾರಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆಗ ನೀರಿನ ಟ್ಯಾಂಕ್ ನಲ್ಲಿ ರಾಸಾಯನಿಕ ಬೆರೆಸಿರುವುದು ಪತ್ತೆಯಾಗಿದೆ. ಈ ಶಾಲೆಯಲ್ಲಿ ಇಂತಹ ಹಲವು ಘಟನೆಗಳು ನಡೆಯುತ್ತಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...