ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮಾತ್ರ ಶಾಲಾ ವಾಹನಗಳನ್ನು ಖರೀದಿಸಲು ತಗುಲುವ ವೆಚ್ಚವನ್ನು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಭರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಅಧಿಕೃತ ಜ್ಞಾಪನ ಪತ್ರ ಹೊರಡಿಸಿದೆ.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆ ಮಾಡಲಾಗುತ್ತಿದ್ದು, ವಾಹನ ಖರೀದಿಸಲು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವೆಚ್ಚ ಭರಿಸಲು ಸೂಚಿಸಲಾಗಿದೆ.
ಶಾಲಾ ವಾಹನಕ್ಕೆ ಚಾಲಕರ ವೇತನ ಹಾಗೂ ಪೆಟ್ರೋಲ್/ ಡೀಸೆಲ್ / ದುರಸ್ತಿ ವೆಚ್ಚಗಳನ್ನು ಶಾಲಾ ಅಭಿವೃದ್ಧಿ ಹಾಗೂ ಮೆಲುಸ್ತುವಾರಿ ಸಮಿತಿಯು ಇತರೆ ಅನುದಾನದಡಿ ವೆಚ್ಚ ಭರಿಸಬಹುದು ಎಂದು ಸರ್ಕಾರದ ಉಪಕಾರ್ಯದರ್ಶಿ ಡಿ.ಚಂದ್ರಶೇಖರಯ್ಯ ಆದೇಶ ಹೊರಡಿಸಿದ್ದಾರೆ.