ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1 ರಿಂದ ಅನ್ವಯವಾಗುವಂತೆ ಶೇಕಡ 11 ರಷ್ಟು ತುಟ್ಟಿಭತ್ಯೆ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇಕಡ 11.25 ರಷ್ಟು ಇದೆ. ಶೇಕಡ 11 ರಷ್ಟು ಹೆಚ್ಚಳ ಆದೇಶ ಜಾರಿಯಾಗಿ ಮೂಲವೇತನಕ್ಕೆ ಅನ್ವಯವಾಗುವಂತೆ ಶೇಕಡ 22.25 ರಷ್ಟು ಡಿಎ ಸಿಗಲಿದೆ. ಕೇಂದ್ರದ ನೌಕರರಿಗೆ ಶೇಕಡ 11 ರಷ್ಟು ತುಟ್ಟಿಭತ್ಯೆ ನೀಡುವ ತೀರ್ಮಾನ ಕೈಗೊಂಡಿದ್ದು, ಅಂತೆಯೇ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಶೇಕಡ 11 ರಷ್ಟು ಡಿಎ ನೀಡಲು ಕ್ರಮ ಕೈಗೊಳ್ಳಲಾಗಿದೆ.