ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಸಿಗಬಹುದು. ಮಾಧ್ಯಮ ವರದಿಗಳ ಪ್ರಕಾರ, 7 ನೇ ವೇತನ ಆಯೋಗದ ಅಡಿಯಲ್ಲಿ, ಕೇಂದ್ರ ಸರ್ಕಾರಿ ನೌಕರರು ಸ್ವಲ್ಪ ಹೆಚ್ಚುವರಿ ವೇತನವನ್ನು ಪಡೆಯಬಹುದು.
ಮಾರ್ಚ್ ತಿಂಗಳ ಸಂಬಳದ ಜೊತೆಗೆ ಕಳೆದ ಎರಡು ತಿಂಗಳಿನಿಂದ ಹೆಚ್ಚಿದ ಡಿಎ ಹೆಚ್ಚಳ ಮತ್ತು ಬಾಕಿ ಹಣವನ್ನು ಸರ್ಕಾರ ವರ್ಗಾಯಿಸಬಹುದು ಎಂದು ಹೇಳಲಾಗುತ್ತಿದೆ.
ಶೇ.3 ರಷ್ಟು ಡಿಎ ಹೆಚ್ಚಳ ಎಂದರೆ ಕೇಂದ್ರ ಸರ್ಕಾರಿ ನೌಕರರ ಒಟ್ಟು ಡಿಎ 34% ಆಗಿರುತ್ತದೆ. ಇದರರ್ಥ ರೂ. 18,000 ಮೂಲ ವೇತನ ಹೊಂದಿರುವ ಕೇಂದ್ರ ಸರ್ಕಾರಿ ಉದ್ಯೋಗಿ ವಾರ್ಷಿಕ 73,440 ರೂ. ತುಟ್ಟಿ ಭತ್ಯೆಯನ್ನು ಪಡೆಯುತ್ತಾರೆ. ಇನ್ನು ಡಿಎ ಹೆಚ್ಚಳದ ವಿಚಾರವಾಗಿ ಮತ್ತೊಂದು ಮಹತ್ವದ ಮಾಹಿತಿ ಲಭ್ಯವಾಗಿದ್ದು, ಈ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರ ಮಾರ್ಚ್ 16ರಂದು ಸಭೆ ನಡೆಸುವ ಸಾಧ್ಯತೆಯಿದೆ.
ಈ ಸಂಬಂಧ ಹೋಳಿಗೆ ಮೊದಲು ಯಾವುದೇ ಸಮಯದಲ್ಲಿ ಕೇಂದ್ರ ಸರ್ಕಾರ ಅಧಿಕೃತ ಹೇಳಿಕೆಯನ್ನು ನೀಡಬಹುದು ಎಂದು ಹಿಂದೆ ಹೇಳಲಾಗಿತ್ತು. ಆದರೆ ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಮಾರ್ಚ್ 16 ರಂದು ಅಂದರೆ ಹೋಳಿಗೆ ಮುಂಚೆಯೇ ಈ ವಿಚಾರದ ಬಗ್ಗೆ ಅಂತಿಮ ನಿರ್ಧಾರವು ಹೊರ ಬರಬಹುದು ಎನ್ನಲಾಗುತ್ತಿದೆ.
ಡಿಎ ಹೆಚ್ಚಳದ ಜೊತೆಗೆ ಕೇಂದ್ರ ಸರ್ಕಾರಿ ನೌಕರರು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಮೋದಿ ಸರ್ಕಾರ ನೌಕರರ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ಬಗ್ಗೆ ಘೋಷಣೆ ಮಾಡಿದರೆ, ಅದರ ಭಾಗವಾಗಿ ಅವರ ಸಂಬಳ ಹೆಚ್ಚಾಗುತ್ತದೆ. ಅಷ್ಟು ಮಾತ್ರವಲ್ಲ, ಫಿಟ್ಮೆಂಟ್ ಅಂಶದ ಹೆಚ್ಚಳದೊಂದಿಗೆ, ಕನಿಷ್ಠ ವೇತನವೂ ಹೆಚ್ಚಾಗುತ್ತದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.