ಜಗತ್ತಿನಲ್ಲಿ ಎಂತೆಂಥ ಜನರಿರುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವಿಶ್ವದ ಕುಖ್ಯಾತ ಭಯೋತ್ಪಾದಕ ಎಂದೇ ಹೆಸರಾಗಿದ್ದ ಅಲ್ ಖೈದಾ ಸಂಸ್ಥಾಪಕ ಒಸಮಾ ಬಿನ್ ಲಾಡೆನ್ ಫೋಟೋವನ್ನು ಉತ್ತರ ಪ್ರದೇಶದ ಸರ್ಕಾರಿ ನೌಕರನೊಬ್ಬ ತನ್ನ ಕಚೇರಿಯಲ್ಲಿ ಇಟ್ಟುಕೊಂಡಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ.
ಸರ್ಕಾರಿ ಸ್ವಾಮ್ಯದ ದಕ್ಷಿಣಾಂಚಲ ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ ನ ಉಪ ವಿಭಾಗಾಧಿಕಾರಿ ರವೀಂದ್ರ ಪರೇಖ್ ಗೌತಮ್ ತನ್ನ ಕಚೇರಿಯಲ್ಲಿ ಒಸಾಮಾ ಬಿನ್ ಲಾಡೆನ್ ಫೋಟೋ ಇಟ್ಟುಕೊಂಡಿದ್ದು, ಇದರ ಕೆಳಗಡೆ ವಿಶ್ವದ ಶ್ರೇಷ್ಠ ಜೂನಿಯರ್ ಇಂಜಿನಿಯರ್ ಎಂದು ಬರೆಯಲಾಗಿತ್ತು.
ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಉತ್ತರಪ್ರದೇಶ ಸರ್ಕಾರ ಇದೀಗ ರವೀಂದ್ರ ಪರೇಖ್ ಗೌತಮ್ ನನ್ನು ಕೆಲಸದಿಂದ ಸಸ್ಪೆಂಡ್ ಮಾಡಿದೆ. ಇಷ್ಟಾದರೂ ಸಹ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಆತ ಲಾಡೆನ್ ವಿಶ್ವದ ಶ್ರೇಷ್ಠ ಜೂನಿಯರ್ ಇಂಜಿನಿಯರ್ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆ ಫೋಟೋ ತೆಗೆದರೆ ಏನು ನನ್ನ ಬಳಿ ಇನ್ನೂ ಸಾಕಷ್ಟು ಫೋಟೋಗಳು ಇದೆ ಎಂದಿದ್ದಾರೆ.