ಮೈಸೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಈವರೆಗೆ ಸೈಲೆಂಟ್ ಆಗಿ ಕಸರತ್ತು ನಡೆಸಿದ್ದ ಸಚಿವ ಸಿ.ಪಿ.ಯೋಗೇಶ್ವರ್ ಇದೀಗ ಬಹಿರಂಗವಾಗಿ ಬಾಂಬ್ ಸಿಡಿಸಿದ್ದು, ಮುಖ್ಯಮಂತ್ರಿ ಹುದ್ದೆ ವೈಭವಕ್ಕೆ ಆಗುವುದಲ್ಲ, ಅಂಬಾರಿ ಹೋರಲು ಯಾವ ಆನೆ ಸೂಕ್ತ ಎಂಬುದು ಮುಖ್ಯ ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಯೋಗೇಶ್ವರ್, ಸಿಎಂ ಎಂದರೆ ರಾಜ್ಯದ ಜನತೆ ಆಶೋತ್ತರಗಳಿಗೆ ಸ್ಪಂದಿಸಬೇಕು. ಸಿಎಂ ಬಹಳ ಸಂವೇದನಾಶೀಲರಾಗಿರಬೇಕು. ಅಂಬಾರಿ ಹೊರಬೇಕು ಎಂದರೆ ಯಾವ ಆನೆ ಸೂಕ್ತ, ಭಾರ ಹೊರಲು ಸಾಧ್ಯವೇ ಎಂಬುದನ್ನು ಯೋಚಿಸಿ ಆನೆ ಬದಲಿಸುತ್ತಾರೆ. ಹಾಗೇ ಬದಲಾವಣೆ ಎಂಬುದು ಜಗದ ನಿಯಮ ಎಂದು ಪರೋಕ್ಷವಾಗಿ ಸಿಎಂ ಬದಲಾವಣೆ ಮಾತನಾಡಿದ್ದಾರೆ.
ಚಿಮ್ಮುತ್ತಿರುವ ನೀರಿನಲ್ಲಿ ಮೋಜಿನಾಟವಾಡುತ್ತಿರುವ ಆನೆ ವಿಡಿಯೋ ವೈರಲ್
ಇನ್ನು ಅಂಬಾರಿಯನ್ನು ಅರ್ಜುನ್ ಒಂದಷ್ಟು ವರ್ಷ ಹೊತ್ತ, ಅಭಿಮನ್ಯು ಹೊತ್ತ, ಬಲರಾಮ ಒಂದಷ್ಟು ವರ್ಷ ಹೊತ್ತ ಹೀಗಂತ ಅದರ ಮರಿಯಾನೆಗೂ ಅಂಬಾನಿ ಹೊರಲು ಅವಕಾಶ ಕೊಡಲು ಆಗಲ್ಲ. ಅಪ್ಪ ಹೊತ್ತಿದ್ದಾನೆ ಎಂದು ಮರಿಯಾನೆಗೂ ಅಂಬಾರಿ ಹೊರಿಸಲಾಗುತ್ತಾ ? ಅದು ಸಾಧ್ಯವಿಲ್ಲ, ಹಾಗಾಗಿ ಬದಲಾವಣೆ ಪ್ರಕೃತಿ ಸಹಜ. ಮುಂದಿನ ದಿನಗಳಲ್ಲಿ ಕಾದು ನೋಡೋಣ ಎಂದು ಹೇಳುವ ಮೂಲಕ ಬಿ.ವೈ. ವಿಜಯೇಂದ್ರಗೂ ಟಾಂಗ್ ನೀಡಿದ್ದಾರೆ.