
ಹೌದು, ಬೊಮ್ಮಾಯಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆ ಜನಸ್ಪಂದನ ಕಾರ್ಯಕ್ರಮ ನಡೆಸಲಾಯ್ತು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡುವಾಗ ಜನರೇ ಇರಲಿಲ್ಲ. ಖಾಲಿ ಖಾಲಿ ಕುರ್ಚಿಗಳು ಕಂಡು ಬಂದವು.
ಈ ಖಾಲಿ ಕುರ್ಚಿಗಳ ವಿಡಿಯೋಗಳನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದು ಜನಸ್ಪಂದನೆಯಲ್ಲ, ಖಾಲಿ ಕುರ್ಚಿಗಳ ಸ್ಪಂದನೆ. ಇದು ಜನೋತ್ಸವವಲ್ಲ, ಖಾಲಿ ಕುರ್ಚಿಗಳ ಉತ್ಸವ. ರಾಜ್ಯಕ್ಕೆ ದ್ರೋಹವೆಸಗಿ ಪೊಳ್ಳು ಸಮಾವೇಶ ಮಾಡಿದ್ದಕ್ಕೆ ಜನತೆ ತಕ್ಕ ಉತ್ತರ ಕೊಟ್ಟಿದ್ದಾರೆ. ಅವರ ಒಂದು ವರ್ಷದ ಸಾಧನೆ ಏನೆಂದು ಈ ಖಾಲಿ ಕುರ್ಚಿಗಳೇ ಹೇಳುತ್ತಿವೆ. ಎಂದು ವ್ಯಗ್ಯಂಗವಾಡಿದೆ.