ಸರ್ಫಿಂಗ್ ಅನ್ನು ಅನೇಕ ಸಾಹಸ ಕ್ರೀಡೆಗಳ ಉತ್ಸಾಹಿಗಳು ಇಷ್ಟಪಡುತ್ತಾರೆ. ಇತ್ತೀಚಿಗೆ, ಸಾಕು ನಾಯಿಯೊಂದು ಸರ್ಫ್‌ಬೋರ್ಡ್‌ನಲ್ಲಿ ಸರ್ಫಿಂಗ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಆದರೆ ಎಂದಾದ್ರು ಮಗು ಸರ್ಫ್ ಮಾಡಿರೋದನ್ನು ನೀವು ನೋಡಿದ್ದೀರಾ..?
ಹೌದು, ಪುಟಾಣಿ ಸರ್ಫರ್ ತನ್ನ ಶೌರ್ಯ ಮತ್ತು ಮೋಹಕತೆಯಿಂದ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಪುಟಾಣಿ ಕಂದ ಸ್ಪೀಡ್‌ಬೋಟ್‌ನ ಹಿಂದೆ ಸರ್ಫಿಂಗ್ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಮುದ್ದಾದ ಪುಟ್ಟ ಮಗು ನೀರಿಗೆ ಬೀಳದಂತೆ ರಕ್ಷಿಸಲು ತನ್ನ ದೇಹಕ್ಕೆ ಸುರಕ್ಷತಾ ಬೆಲ್ಟ್‌ನೊಂದಿಗೆ ಸರ್ಫ್‌ಬೋರ್ಡ್‌ನಲ್ಲಿ ನಿಂತಿದೆ.
ಹಗ್ಗಗಳನ್ನು ಹಿಡಿದುಕೊಂಡಿದ್ದ ಮಗು ನೀರಿನಲ್ಲಿ ಸರ್ಫ್ ಮಾಡುತ್ತಾ ಆನಂದಿಸಿದ್ದಾನೆ. ಬೋಟ್ ನಲ್ಲಿ ಮಗುವಿನ ತಂದೆ, ತನ್ನ ಮಗುವನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾ, ಮಗುವನ್ನು ಬೆಂಬಲಿಸಿದ್ದಾನೆ. ಮಗು ಕೂಡ ನಗೆ ಬೀರುತ್ತಾ ಸರ್ಫಿಂಗ್ ಮಾಡುವುದನ್ನು ಎಂಜಾಯ್ ಮಾಡಿದೆ.
ಪುಟ್ಟ ಸರ್ಫರ್ ಸುರಕ್ಷತಾ ಜಾಕೆಟ್ ಧರಿಸಿದ್ದ. ಅಲ್ಲದೆ ಮಗು ಸರ್ಫ್ ಮಾಡುವಾಗ ಅವನತ್ತ ಪೋಷಕರು ಗಮನ ಹರಿಸುತ್ತಿದ್ದರೂ ಕೂಡ ಕೆಲವು ಟ್ವಿಟ್ಟರ್ ಬಳಕೆದಾರರಿಗೆ ಖುಷಿ ತಂದಿಲ್ಲ. ನಡೆಯಲು ಸಾಧ್ಯವಾಗದ ಮಗುವಿನ ವಯಸ್ಸಿಗೆ ಇದು ತುಂಬಾ ಅಪಾಯಕಾರಿ ಎಂದು ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಕೆಲವು ಬಳಕೆದಾರರು ಕಂದನನ್ನು ತುಂಬಾ ಧೈರ್ಯಶಾಲಿ ಎಂದು ಪ್ರಶಂಸಿಸಿದ್ದಾರೆ.
https://twitter.com/TheFigen/status/1529494395095076866?ref_src=twsrc%5Etfw%7Ctwcamp%5Etweetembed%7Ctwterm%5E1529494395095076866%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-little-surfer-baby-boy-surfs-alone-behind-speedboat-twitter-divided-5417812%2F