ಆಧುನಿಕ ಜೀವನ ಶೈಲಿ, ಒತ್ತಡದ ಕಾರಣದಿಂದ ಸರಸಕ್ಕೆ ಪುರುಸೊತ್ತು ಸಿಗಲ್ಲ. ಸಿಕ್ಕರೂ, ದೇಹ ಮನಸ್ಸು ಸ್ಪಂದಿಸಲ್ಲ. ಸೆಕ್ಸ್ ಎಂದ ಕೂಡಲೇ, ಮನದಲ್ಲಿಯೇ ಸಂಭ್ರಮ ಮೇಳೈಸುತ್ತದೆ. ಆದರೆ, ಹಲವಾರು ಕಾರಣದಿಂದ ಸೆಕ್ಸ್ ಕೆಲವರಿಗೆ ಬೇಡ ಎನಿಸುತ್ತದೆ.
ಇಂಗ್ಲೆಂಡ್ ನಲ್ಲಿ ಹೆಚ್ಚಾಗಿ ಯಾರು ಸೆಕ್ಸ್ ನಲ್ಲಿ ಪಾಲ್ಗೊಳ್ಳುತ್ತಾರೆ? ಮತ್ತು ಅದಕ್ಕೆಲ್ಲಾ ಕಾರಣವೇನು? ಎಂಬುದರ ಕುರಿತಂತೆ ಸಮೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಹಲವಾರು ಸಂಗತಿಗಳು ಗೊತ್ತಾಗಿತ್ತು. ಬ್ರಿಟಿಷ್ ಟಿವಿ ವತಿಯಿಂದ ಸಂಸ್ಥೆಯೊಂದರ ಸಹಯೋಗದಲ್ಲಿ ಇಂಗ್ಲೆಂಡ್ ನಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು, ಈ ವೇಳೆ ಅದರಲ್ಲಿ ಕಂಡು ಬಂದ ಮಾಹಿತಿಯಂತೆ, ಈಶಾನ್ಯ ಇಂಗ್ಲೆಂಡ್ ವಾಸಿಗಳು ಹೆಚ್ಚು ಸಲ ಸೆಕ್ಸ್ ನಲ್ಲಿ ಪಾಲ್ಗೊಳ್ಳುವ ಮೂಲಕ ಸುಖ ಅನುಭವಿಸುತ್ತಾರೆ ಎಂದು ಹೇಳಲಾಗಿತ್ತು.
ಈಶಾನ್ಯ ಇಂಗ್ಲೆಂಡ್ ವಾಸಿಗಳು ತಿಂಗಳಿಗೆ 5 ಸಲ ಇದರಲ್ಲಿ ಪಾಲ್ಗೊಂಡರೆ, ವೇಲ್ಸ್ ನಿವಾಸಿಗಳು ಕೇವಲ ಎರಡು ಸಲ ಮಾತ್ರ ಪಾಲ್ಗೊಳ್ಳುತ್ತಾರೆ. ಒಟ್ಟಾರೆ ಬ್ರಿಟನ್ ನಲ್ಲಿ ಸರಾಸರಿ ತಿಂಗಳಿಗೆ 3 ಸಲ ಸೇರುತ್ತಾರೆ ಎಂದು ಹೇಳಲಾಗಿದ್ದು, ಈ ಸಮೀಕ್ಷೆ ಆ ಸಂದರ್ಭದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು ಎನ್ನಲಾಗಿದೆ.